Saturday, April 27, 2024
spot_imgspot_img
spot_imgspot_img

ಹಾವುಗಳಿಗೆ ಸೆಕೆಯ ಕಾಟ..! ಆಹಾರಕ್ಕಾಗಿ ಓಡಾಟ.. ಇವೆಲ್ಲದರ ಮಧ್ಯೆ ಸಿಲುಕುವ ಜನರಿಗೆ ಪ್ರಾಣ ಸಂಕಟ.. ಎಚ್ಚರ.!

- Advertisement -G L Acharya panikkar
- Advertisement -

ಏಪ್ರಿಲ್, ಮೇ, ಜೂನ್ ತಿಂಗಳು ಹಾವುಗಳ ಸಂತಾನೋತ್ಪತ್ತಿಯ ಕಾಲ. ಜತೆಗೆ ಸೆಕೆಯ ಕಾಟ, ಆಹಾರಕ್ಕಾಗಿ ಓಡಾಟ… ಇವೆಲ್ಲದರ ಮಧ್ಯೆ ಸಿಲುಕುವ ಮನುಷ್ಯರಿಗೆ ವಿಷದ ಹಾವುಗಳಿಂದ ಪ್ರಾಣ ಸಂಕಟ…

ವಾತಾವರಣದಲ್ಲಿ ಉಷ್ಣತೆ ಏರಿ ಭೂಮಿ ಬಿಸಿಯಾದರೆ, ವಿಷದ ಹಾವುಗಳು (ಕಂದಡಿ-ವೈಪರ್, ಕಡಂಬಳಕ-ಕ್ರೆಯಿಟ್, ಕೋಬ್ರಾ-ನಾಗರಹಾವು, ಗರಗಸ ಹುರುಪೆಯ ಮಂಡಲದ ಹಾವು(ಸಾ ಸ್ಕೇಲ್ಡ್ ವೈಪರ್) ಸೆಕೆ ತಾಳಲಾರದೆ , ಆಹಾರ ಅರಸುತ್ತಾ ತಮ್ಮ ಗೂಡನ್ನು ಬಿಟ್ಟು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಹೀಗಾಗಿ ಅದೆಷ್ಟೋ ಜನರು ಹಾವು ಕಡಿತಕ್ಕೊಳಗಾಗಿ ಪ್ರಾಣ ಸಂಕಟ ಅನುಭವಿಸುವಂತಾಗುತ್ತದೆ.

ಈ ಅಪಾಯದಿಂದ ಪಾರಾಗಲು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು

*ಮಲಗುವ ಮುನ್ನ ಮನೆಯ ಒಳ ಹೊರ ಭಾಗವನ್ನು ಚೆನ್ನಾಗಿ ಗಮನಿಸಿ, ಬಾಗಿಲು ಕಿಟಕಿಗಳನ್ನು ಭಧ್ರವಾಗಿ ಮುಚ್ಚಿ.
*ರಾತ್ರಿ ವೇಳೆ ಹೊರಗೆ ಹೋಗುವಾಗ ಮನೆಯ ಹೊರಗೆ ಲೈಟ್ ಹಾಕಿ, ಕೈಯಲ್ಲಿ ಟಾರ್ಚ್ ಲೈಟ್ ಇಟ್ಟುಕೊಂಡು ನಡೆಯುವಾಗ ಧೃಢವಾಗಿ ನಡೆಯಿರಿ.
*ಹತ್ತುವ ಮೊದಲು ನಿಲುಗಡೆ ಮಾಡಿದ ವಾಹನದ ಒಳಗೆ ಚೆನ್ನಾಗಿ ನೋಡಿ.
*ನಿಮ್ಮ ವಾಹನಗಳನ್ನು ಗಿಡಗಂಟೆಗಳು ಅಥವಾ ಹುಲ್ಲುಗಾವಲುಗಳಲ್ಲಿ ನಿಲ್ಲಿಸಬೇಡಿ.
*ಸಂಪೂರ್ಣ ತಪಾಸಣೆಯ ನಂತರ ಹೆಲ್ಮೆಟ್, ಜಾಕೆಟ್ ಮತ್ತು ಬೂಟುಗಳನ್ನು ಧರಿಸಿ.

ವಿಟ್ಲದ ಆಸುಪಾಸಿನಲ್ಲಿ ವಿಷಕಾರಿ ಹಾವುಗಳು ಕಂಡುಬoದಲ್ಲಿ ಸಂಪರ್ಕಿಸಿ, ಮುರಳೀಧರ ವಿಟ್ಲ. ಮೊ; 9448868841, 9535099955

- Advertisement -

Related news

error: Content is protected !!