Thursday, March 28, 2024
spot_imgspot_img
spot_imgspot_img

ಆತ್ಮಾಹುತಿ ಬಾಂಬ್​ ದಾಳಿ- ಏಳು ಜನ ಸಾವು!!

- Advertisement -G L Acharya panikkar
- Advertisement -

ಮೊಗಾಡಿಶು: ಅಲ್-ಶಬಾಬ್ ಉಗ್ರಗಾಮಿ ಸಂಘಟನೆ ಸೊಮಾಲಿಯಾದ ರಾಜಧಾನಿಯಲ್ಲಿ ನಡೆಸಿರುವ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಏಳು ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್-ಖೈದಾ ನಂಟಿನ ಅಲ್-ಶಬಾಬ್ ಉಗ್ರಗಾಮಿ ಸಂಘಟನೆ ಐಸ್ ಕ್ರೀಮ್ ಅಂಗಡಿಯಲ್ಲಿ ಈ ದಾಳಿ ನಡೆಸಿದೆ. ಇದರ ಹೊಣೆ ಕೂಡ ಹೊತ್ತುಕೊಂಡಿದೆ.ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ಟೋಫರ್ ಮಿಲ್ಲರ್ ಅವರು ರಾಯಭಾರಿ ಮತ್ತು ಮಿಲಿಟರಿ ಸಿಬ್ಬಂದಿ ಭೇಟಿ ಮಾಡಿದ ಕೆಲವೇ ಸಮಯದ ಬಳಿಕ ಈ ಘಟನೆ ನಡೆದಿದೆ.

ಈ ದಾಳಿಯಲ್ಲಿ ಕನಿಷ್ಟ ಎಂಟು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೊಮಾಲಿಯ ಸರ್ಕಾರದ ವಕ್ತಾರ ಸಲಾಹ್ ಒಮರ್ ಹಸನ್ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!