Friday, June 5, 2026
spot_imgspot_img
spot_imgspot_img

ತಾಯಿ ಕೊಲೆಗೈದವನ ಮೇಲೆ 6 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಮಗ

- Advertisement -
- Advertisement -

ತಾಯಿಯನ್ನು ಹತ್ಯೆಗೈದಿದ್ದ ಆರೋಪಿಯನ್ನು ಆರು ವರ್ಷಗಳ ಬಳಿಕ ಮಗ ಬರ್ಬರವಾಗಿ ಕೊಲೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ನಡೆದಿದೆ.

ನಾರಾಯಣಪ್ಪ (52) ಕೊಲೆಯಾದ ವ್ಯಕ್ತಿ. ಮಧು ಎಂಬಾತ ಕೊಲೆ ಆರೋಪಿ. ಆರು ವರ್ಷದ ಹಿಂದೆ ಮಧುವಿನ ತಾಯಿಯನ್ನು ನಾರಾಯಣಪ್ಪ ಕೊಂದಿದ್ದ. ನಂತರ ಜೈಲುಪಾಲಾಗಿ, ಮೂರು ವರ್ಷದ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದು ಮಂಡ್ಯದಲ್ಲಿ ವಾಸವಿದ್ದ. ಆದರೆ ನಾರಾಯಣಪ್ಪ 15 ದಿನದ ಹಿಂದೆ ಸಮಂದೂರಿಗೆ ಬಂದಿದ್ದ. ಇದು ಮಧುಗೆ ಗೊತ್ತಾಗಿ, ಬಳಿಕ ನಿನ್ನೆ ಸಂಜೆ ನಾರಾಯಣಸ್ವಾಮಿ ಹಾಗೂ ಮಧು ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮಧು ಕೋಪಗೊಂಡು ನಾರಾಯಣಪ್ಪನ ತಲೆ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿ ಮಧು ಪತ್ತೆಗೆ ಬಲೆ ಬೀಸಲಾಗಿದೆ.

- Advertisement -

Related news

error: Content is protected !!