Friday, May 17, 2024
spot_imgspot_img
spot_imgspot_img

ಕೊಡಗಿನಲ್ಲಿ ತಲೆ ಎತ್ತಿದೆ ದಕ್ಷಿಣ ಭಾರತದ ಎರಡನೇ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್

- Advertisement -G L Acharya panikkar
- Advertisement -

ಮಂಜಿನ ನಗರಿ ಮಡಿಕೇರಿ ಹೊರವಲಯದ ಉಡೋತ್ ಎಂಬಲ್ಲಿ 31 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಈ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಎಲ್ಲರ ಗಮನ ಸೆಳೆಯುತ್ತಿದೆ. ಸುಂದರ ಪ್ರಾಕೃತಿಕ ಸೌಂದರ್ಯದ ಮೂಲಕ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಸದ್ಯ ಈ ಪ್ರವಾಸೋದ್ಯಮಕ್ಕೆ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಹೊಸ ಸೇರ್ಪಡೆಯಾಗಿದೆ. ಖಾಸಗಿಯಾಗಿ ಆರಂಭವಾಗಿರುವ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಇಡೀ ದಕ್ಷಿಣ ಭಾರತದ ಗಮನ ಸೆಳೆಯುತ್ತಿದೆ.

ಸುಮಾರು 5 ಟನ್ ಬಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್‌ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಅವರಿಂದ ಈ‌ ಬ್ರಿಡ್ಜ್ ಲೋಕಾರ್ಪಣೆಗೊಂಡಿದೆ. ಎತ್ತರದಲ್ಲಿರುವ ಗ್ಲಾಸ್ ಸೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ನಂತರ ಮಾತನಾಡಿದ ಪೊನ್ನಣ್ಣ, ಕೊಡಗು ಪ್ರಕೃತಿ ದತ್ತವಾದ ಜಿಲ್ಲೆಯಾಗಿದೆ. ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಎಂದರು. ಈ ಅಪರೂಪದ ಯೋಜನೆಯಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಜೊತೆಗೆ ಅವಲಂಬಿತರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು. ಗ್ರೀನ್ ಸಿಟಿ ಫೋರಂ ನ ಅಧ್ಯಕ್ಷ ಚೆಯ್ಯಂಡ ಸತ್ಯ, ಉದ್ಯಮಿ ಹೆಚ್.ಎಂ.ನಂದಕುಮಾರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಕೇರಳದ ವಯನಾಡ್‌ನಲ್ಲಿ ಖಾಸಗಿಯಾಗಿ ನಿರ್ಮಾಣವಾಗಿದ್ದ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಬಿಟ್ಟರೆ ದಕ್ಷಿಣ ಭಾರತದಲ್ಲಿ ಇರುವ ಗ್ಲಾಸ್ ಬ್ರಿಡ್ಜ್ ಎನ್ನುವ ಖ್ಯಾತಿಗೆ ಕೊಡಗಿನ ಈ ಗ್ಲಾಸ್ ಬ್ರಿಡ್ಜ್ ಪಾತ್ರವಾಗಿದೆ.

- Advertisement -

Related news

error: Content is protected !!