Friday, April 26, 2024
spot_imgspot_img
spot_imgspot_img

ಎದ್ದು ಬಿದ್ದು ನಿದ್ದೆ ಬಿಟ್ಟು ಓದ್ದೆ ಈಗ ಎಲ್ಲ ರದ್ದು..!

- Advertisement -G L Acharya panikkar
- Advertisement -

ಲೇಖನ: ನಮ್ಗೆ ಎಕ್ಸಾಮ್ ಇಲ್ಲ, ಹೇಗೆ ಮಾಡಿದ್ರು ಎಲ್ಲಾ ಪಾಸು ಎಂಬ ಸರಕಾರದ ಮಾನ್ಸೂನ್ ಆಫರ್ ಬಂಪರ್ ಆಗ್ ಬಿಡ್ತು ಕೆಲವರ್ಗೆ. ಸ್ಕೂಲ್ ಮೇಲೆ ನಂಬಿಕೆ ಇಟ್ಟು, ಮೇಡಮ್ ಮೇಲೆ ಗೌರವ ಇಟ್ಟು ಅಟ್ಟಿ-ಕಟ್ಟಿ ಪೇಪರ್ ಪ್ರಾಕ್ಟೀಸ್ ಮಾಡಿದ್ದು ಫುಲ್ ಟುಸ್ ಅಂತ ಬೇಜಾರಾಗಿ ಬಿಡ್ತು ಹಲವರ್ಗೆ.

ನೀಟ್ – ಗೀಟು ರೆಡಿ ಮಾಡಿ ತೆಪ್ಪಗೆ ಆನ್ಲೈನ್ ಕ್ಲಾಸ್ಗೆ ದುಡ್ಡು ಕಟ್ಟಿ ಮಾರ್ಕ್ಸ್ ಬರ್ಲೆ ಬೇಕು ಅಂತ ಹಟ ಮಾಡಿ ರೂಮೊಲ್ಗೆ ಹಾಕಿ ಓದಿಸಿದ ಅಪ್ಪ ಅಮ್ಮ ನಿದ್ದೆ ಬಿಟ್ಟಿದ್ದೆ ಬಂತು. ಎಲ್ರೂ ಡಿಸ್ಟಿಂಕ್ಷನ್ , ಸ್ಟೇಟ್ಗೆ ಫಸ್ಟ್ ಬರ್ಲೇ ಬೇಕೂಂತ ಹಟ ಕಟ್ಟಿದ ಸ್ಕೂಲ್ಗೆ ಶ್ವಾಸ ನಿಶ್ವಾಸ ಆಯ್ತೂರಿ. ಯಾರ್ಗೆ ಹೇಳ್ಳಿ ಗೋಳಾಟ. ಕೊರೋನಕ್ಕೆ ಹೇಳ್ಳ ಅಲ್ಲ ನಮ್ದೇ ಮೇಲಾಗ್ಬೇಕು ಅನ್ನೋ ಶಕ್ತಿಗಳಲ್ಲಿ ಹೇಳ್ಳೋ?


ಕಳೆದ ವರ್ಷ ಏನೋ ಮಾಡಿ ಪರೀಕ್ಷೆ ಮಾಡಿಬಿಟ್ರು. ಈ ವರ್ಷ ಅದೂ ಇಲ್ಲ. ಮಕ್ಲೆಲ್ಲ ಹೇಳೋದು ಕೇಳಿದ್ರಾ “ಎಕ್ಸಾಮ್ ಇಲ್ದೆ ಕಳೆದ ವರ್ಷ ಪಾಸ್, ಈ ವರ್ಷ ಪಾಸು, ಬರೋ ವರ್ಶನೂ ಹೀಗಾದ್ರೆ ಹ್ಯಾಟ್ರಿಕ್” ಅಂತ. ಈ ವರ್ಷ ಅಂತೂ ಹೆತ್ತವರಿಗೆ ಮಕ್ಕಳದ್ದೆ ಭಯ.ಟಿವಿ ನೋಡಿ ನೋಡಿ ಮಕ್ಕಳ ಕಣ್ಣು ಸಣ್ಣದಾಗಿ ಪಟ ಪಟ ಹೊಡಿತಿದೆ. ಮೊಬೈಲ್ ಆನ್ಲೈನ್ ಇಲ್ದಿದ್ರು ಇದೆ ಅಂತ ಹೇಳಿ ಮೋಡಿ ಮಾಡಿ ದೃಷ್ಟಿ ಹಾಳು, ಮೈಂಡು ಹಾಳು ಮಾಡ್ತಾರಲ್ಲ ಅಂತ. ಸ್ಕೂಲ್ ಒಂದಿದೆ ಅಂತಾನೆ ಮರೆತ್ ಬಿಟ್ಟು ಅಪ್ಪ ಸ್ಕೂಲ್ಗೆ ಹೋಗಿ ಬುಕ್ ತಾ,ಪೇಪರ್ ತಾ ಅನ್ನೋ ಸ್ಟೆಪ್ ಹತ್ ಬಿಟ್ರು ನಮ್ಮ ಮಕ್ಳು. ಪ್ರೈವೇಟ್ ಸ್ಕೂಲ್,ಕಚೇರಿಯಲ್ಲಿ ಕೆಲ್ಸ ಮಾಡೋ ನಮ್ ಸಹೋದರಿಯರ ಕತೆ ಏನ್ ಹೇಳ್ಲಿ ಹೊಸ ರುಚಿ ಮಾಡಿ ಮಾಡಿ ಸುಸ್ತಾಗಿ ಮೀಶೋ, ಮೋದಿಕೇರ್ ಫ್ಲಿಪ್ ಕಾರ್ಟ್, ಅಂತ ಆನ್ಲೈನ್ ಬ್ಯುಸಿನೆಸ್ ಶುರುಮಾಡಿದ್ದಾರೆ.

ಏನ್ಮಾಡ್ಲಿ ಅರ್ದ ಸಂಬ್ಲ ವರ್ಕೌಟ್ ಆಗಬೇಕಲ್ಲ. ಮನೆಯಲ್ಲೇ ಉಳಿದ ಪ್ರೈವೇಟ್ ಕಚೇರಿ ಗೃಹಸ್ಥರು ಹೆಂಡ್ತಿ ಗೋಳಾಟ ಜೊತೆಗೆ ಬ್ಯಾಂಕ್ ಲೋನ್ ಫೋನ್ ಕಾಲ್ ಅಟೆಂಡ್ ಆಗಿ ಆಗಿ ಹೈರಾಣಾಗಿದ್ದಾರೆ. ಟೈಂಪಾಸ್ ಮಾಡೋದಕ್ಕೆ ಮನೆಯವರೆಲ್ಲ ಮೂಲೆ ಮೂಲೆಗಳಲ್ಲಿ ಮೊಬೈಲ್ ಹಿಡ್ಕೊಂಡು ಅವರಷ್ಟಕ್ಕೆ ನಗ್ತಾ ಅಳ್ತಾ ಪ್ರೆಶರ್ ಹೆಚ್ಚು ಕಮ್ಮಿ ಮಾಡ್ತಿದ್ದಾರೆ.ಖಾಸಗಿ ಶಾಲಾ ಶಿಕ್ಷಕರು – ನೌಕರರು,ಸರಕಾರ ಹೇಳೋ ಅನಗತ್ಯ ವಸ್ತು ಮಾರಾಟಗಾರರು,ಬಸ್,ಕ್ಯಾಬ್, ಟೈಲರ್ ಸೌಂಡ್ಡ್ಸ್, ಲೈಟಿಂಗ್ಸ್,ಶಾಮಿಯಾನ ಹೊಂದಿದ ಮಾಲೀಕರು,ಕಾರ್ಮಿಕರು ಆಕಾಶಕ್ಕೆ ಮುಖ ಮಾಡಿ ಕೂತಿದ್ದಾರೆ.

ಅವರಿಗೆಲ್ಲ ಯಾವ ಕಟ್ಟು- ಕಿಟ್ಟು ಇಲ್ಲ ಯಾಕಂದ್ರೆ ಅವರೆಲ್ಲಾ ಸಮಾಜದ, ಪಂಚಾಯತ್ನ ದ್ರಿಷ್ಟಿಲಿ ಧನಿಕರು. ಪಾಪ ಅವ್ರು ತನ್ನ ಕಷ್ಟ ಯಾರಿಗೆ ಹೇಳ್ಲಿ. ಲಾಕಡೌನ್ ಟೈಮಲ್ಲೂ ಕೆಲ್ಸ ಇರೋ , ಸಂಬಳ ಬರೋ ಕಾರ್ಮಿಕರಿಗೆ ಸರಕಾರದ ವತಿಯಿಂದ ಸ್ಪೆಷಲ್ ಮಾಸಿಕ, ಸೀಸನಲ್ ನಗದು ಗಿಫ್ಟ್. ಎಷ್ಟು ಚೆನ್ನಾಗಿದೆ ಅಲ್ವಾ? ಸರಕಾರಿ ಅಧಿಕಾರಿಗಳ ಬಗ್ಗೆ ಹೇಳಬೇಕಾಗಿಲ್ಲ ಏನಿದ್ದರೂ ಹೇಗಿದ್ದರೂ ಬದಲಾವಣೆ ಇಲ್ಲ. ಸೇವಕರೆನ್ನುವ ಆರೋಗ್ಯ ಇಲಾಖೆ, ಅಂಗನವಾಡಿ, ಕೋರೋನಾ ವಾರಿಯರ್ಸ್ ಅನ್ನುವವರಿಗೆ ಹ್ಯಾಟ್ಸಾಫ್ ಹೇಳ್ಳೆ ಬೇಕು ಯಾಕಂದ್ರೆ ರಾತ್ರಿ ಹಗಲು ಸಂಸಾರ ಬಿಟ್ಟು ಕೆಲ್ಸ ಮಾಡ್ತಾ ಇದ್ದಾರೆ , ಸರಕಾರ ಗುರುತಿಸಿದೆ ಕೂಡ.

ಈ ಮದ್ಯೆ ಬಡಪಾಯಿ ಖಾಸಗಿ ಮೇಷ್ಟ್ರು ಗಳು ಕೈ ಸೇರದ ಸರಕಾರಿ ಘೋಷಿತ ಪರಿಹಾರ ಕ್ಕೆ ಬಟ್ಲು ಹಿಡಿದು ಕಾಯುತ್ತಾ ದಿನ ಕಳೆದರೆ ಸರಕಾರ ಬಿಸ್ಕೇಟ್ ಹಿಡಿದು ಕೈ ಮೇಲೆ ಕೆಳಗೆ ಮಾಡ್ತಿದೆ. ಸ್ಕೂಲ್ ಫಿ ಗುದ್ದಾಟ ಈ ವರ್ಷ ಮುಗಿಯದ ಗಂಟು ಯಾಕಂದ್ರೆ ಆಡಳಿತ ಮಂಡಳಿಗೆ ಮಾಡು ಇಲ್ಲಾಂದ್ರೆ ಮಡಿ ಸ್ತಿತಿಯಾಗ್ ಬಿಟ್ಟಿದೆ. ಲಾಕ್ ಡೌನ್, weekend ಕರ್ಫ್ಯೂ ಮಾರುಕಟ್ಟೆ ನ ಸುಸ್ತಾಗಿಸ್ಹು. ಒಟ್ಟು ಗೊಂದಲದೊಳಗೆ ಆನ್ಲೈನ್ ಕ್ಲಾಸು ಶುರು ಮಾಡಿ ಮಕ್ಳಿಗೆ ಲೈವ್ ಕ್ಲಾಸ್ ಇಲ್ಲಂತ prove ಮಾಡಿದ್ರು. ಅರ್ಥವಿಲ್ಲದ ಡೈಲಿ ಕರ್ಫ್ಯೂ ಹೀಗೂ ಬೇಕ? ಪ್ರಶ್ನೆ ಯೆಬ್ಬಿಸ್ತು. ಇದೆಲ್ಲ ಯಾವಾಗ ಸರಿಯಾಗುತ್ತೆ,ಮನುಷ್ಯ ಸರಿಯಾಗೋವಾಗ್ಲೋ? ಕೋರೋನ ಹೋದಾಗಲೂ? ಅದೇ ಬಲು ದೊಡ್ಡ ಪ್ರಶ್ನೆ.

ರಾಧಾಕೃಷ್ಣ ರಾಮ್ದೇವ್ ವಿಟ್ಲ.

- Advertisement -

Related news

error: Content is protected !!