Sunday, April 28, 2024
spot_imgspot_img
spot_imgspot_img

ವಿಶ್ವ ಬಂಟರ ಸಮ್ಮೇಳನದಲ್ಲಿ ವಿಶೇಷ ಪುರಸ್ಕಾರಕ್ಕೆ ಭಾಜನರಾಗಿರುವ ದಂಪತಿಗಳು

- Advertisement -G L Acharya panikkar
- Advertisement -

ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕು ಕುಳೂರು ಗ್ರಾಮದ ಪೊಯ್ಯೇಲು ನಿವಾಸಿ

ಶ್ರೀ *ಬಿರ್ಮು ಶೆಟ್ಟಿ ಮತ್ತು
ಶ್ರೀಮತಿ ಸೀತಾ ಬಿ ಶೆಟ್ಟಿ

ದಂಪತಿಗಳಿಗೆ ಎಂಟು ಹೆಣ್ಣು ಮಕ್ಕಳು .ಕೇವಲ 10 ಸೆಂಟ್ಸ್ ಜಾಗದಲ್ಲಿ ಚಿಕ್ಕ ಮನೆಯೊಂದರಲ್ಲಿ ವಾಸವಾಗಿರುವ ಬಿರ್ಮು ಶೆಟ್ಟಿ ಯವರು ನಿರಂತರ ಕೂಲಿ ಕೆಲಸ ಮಾಡಿ ,ಸೀತಾ ಶೆಟ್ಟಿ ಯವರು ಬೀಡಿ ಕಟ್ಟಿ ತನ್ನ 8 ಹೆಣ್ಣು ಮಕ್ಕಳಲ್ಲಿ ಮೂರು ಮಂದಿಗೆ ಪದವಿ ವಿದ್ಯಾಭ್ಯಾಸ ಮೂವರಿಗೆ ಪಿಯುಸಿ ವಿದ್ಯಾಭ್ಯಾಸ ಇಬ್ಬರಿಗೆ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ನೀಡಿರುವುದಲ್ಲದೆ ಉತ್ತಮ ಸಂಸ್ಕಾರಯುತ ಗುಣವನ್ನು ಮಕ್ಕಳಿಗೆ ನೀಡಿರುತ್ತಾರೆ.

ವಿಶೇಷವಾಗಿ ತಮ್ಮ 8 ಹೆಣ್ಣು ಮಕ್ಕಳನ್ನೂ ಉತ್ತಮ ಸಂಸ್ಕಾರಯುತ ಬಂಟ ಹುಡುಗರಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ. ಅಲ್ಲದೆ 8 ಹೆಣ್ಣು ಮಕ್ಕಳೂ ತಂದೆ ತಾಯಿ ಒಪ್ಪಿ ನಿಶ್ಚಿತಾರ್ಥ ಮಾಡಿಕೊಟ್ಟ ಹುಡುಗರನ್ನೇ ಮದುವೆಯಾಗಿರುವುದು ಈಗಿನ ಕಾಲಮಾನದಲ್ಲಿ ಬಂಟ ಸಮಾಜ ಹಮ್ಮೆ ಪಡುವಂತಹ ವಿಚಾರ.ಮದುವೆಯಾಗಿರುವ ಎಲ್ಲಾ ಹೆಣ್ಣು ಮಕ್ಕಳು ತನ್ನ ಗಂಡನ ಮನೆಯಲ್ಲಿ ಸುಖೀ ಜೀವನ ನಡೆಸುತ್ತಿದ್ದಾರೆ.

ಎಂಟು ಹೆಣ್ಣು ಮಕ್ಕಳು, ಎಂಟು ಅಳಿಯಂದಿರು, 10 ಮೊಮ್ಮಕ್ಕಳ ಸೌಭಾಗ್ಯವನ್ನು ಪಡೆದಿರುವ ಸ್ವಾಭಿಮಾನಿ ದಂಪತಿಗಳು ಈ ಇಳಿ ವಯಸ್ಸಿನಲ್ಲೂ ಜೀವನ ನಿರ್ವಹಣೆಗೆ ತಾವೇ ದುಡಿದು ಸಂಪಾದಿಸಿ ತಮ್ಮಿಬ್ಬರ ಜೀವನ ನಿರ್ವಹಣೆ ಮಾಡುತ್ತಾರೆ.
ಇಂದಿನ ಬಂಟ ಸಮಾಜದಲ್ಲಿ ಇಂತಹ ದಂಪತಿಗಳು ಇರುವುದೇ ಅಪರೂಪ ಮತ್ತು ಬಂಟ ಸಮಾಜಕ್ಕೆ ಆದರ್ಶ ದಂಪತಿಗಳು.
ಇಂತಹ ಅಪೂರ್ವ ದಂಪತಿಗಳನ್ನು ವಿಶ್ವ ಬಂಟರ ಸಮ್ಮೇಳನದಲ್ಲಿ ವಿಶೇಷ ಪುರಸ್ಕಾರದ ಸನ್ಮಾನಿಸಿ ಗೌರವಿಸಿದ್ದಕ್ಕೆ ಹೆಮ್ಮೆ ಪಡುತ್ತಾ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಅಧ್ಯಕ್ಷರು,ಕಾರ್ಯದರ್ಶಿ, ಕೋಶಾಧಿಕಾರಿ
ಹಾಗೂ ಸರ್ವ ಪದಾಧಿಕಾರಿಗಳು
ಬಂಟರ ಸಂಘ ಮೀಂಜ

- Advertisement -

Related news

error: Content is protected !!