Tuesday, May 7, 2024
spot_imgspot_img
spot_imgspot_img

ವಿಟ್ಲ: (ಡಿ.26) ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮನಗರ ಕಂಬಳಬೆಟ್ಟು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

- Advertisement -G L Acharya panikkar
- Advertisement -

ವಿಟ್ಲ: ದಿನಾಂಕ 26-12-2023ನೇ ಮಂಗಳವಾರ ನೂಜಿಯಲ್ಲಿರುವ ಮಿತ್ತೂರು ವೇದಮೂರ್ತಿ ಪುರೋಹಿತ ಗೋಪಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ, ಶ್ರೀ ಜಯದುರ್ಗಾಪರಮೇಶ್ವರೀ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಧರ್ಮನಗರ ಶ್ರೀ ದುರ್ಗಾಮಂದಿರದಲ್ಲಿ ನೆರವೇರಲಿರುವುದು.

ದಿನಾಂಕ 26-12-2023ನೇ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಗಣಪತಿ ಹವನ, ಬೆಳಿಗ್ಗೆ ಗಂಟೆ 9.30ಕ್ಕೆ ಕಲಶ ಪ್ರತಿಷ್ಠೆ, ನವಕ ಕಲಶಾಭಿಷೇಕ, ಮಧ್ಯಾಹ್ನ ಗಂ.12.30ಕ್ಕೆ: ಮಹಾಮಂಗಳಾರತಿ, ಪ್ರಸಾದ ವಿತರಣೆಯ ನಂತರ ಅನ್ನಸಂತರ್ಪಣೆ ಜರಗಳಿರುವುದು.

ಸಂಜೆ 5 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ನಡೆಯಲಿರುವುದು. ಸಂಜೆ ಗಂಟೆ 7.00ಕ್ಕೆ ಸಾಮೂಹಿಕ ದುರ್ಗಾ ಪೂಜೆ, ರಾತ್ರಿ 8 ಗಂಟೆಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!