Thursday, December 5, 2024
spot_imgspot_img
spot_imgspot_img

ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವ ಆ ವಿಶೇಷ ದೇಗುಲ ಯಾವುದು ಗೊತ್ತಾ..?

- Advertisement -
- Advertisement -

*ವರಮಹಾಲಕ್ಷ್ಮೀ ಹಬ್ಬದ ಪೂರ್ವವಾಗಿ ವಿಶೇಷ ಆಚರಣೆ
*ಬಾಲ ಭೋಜನ ಮೂಲಕ ಮಕ್ಕಳಿಗೆ ಸಂಸ್ಕಾರದ ಪಾಠ
*ಊರು, ಪರವೂರುಗಳಿಂದ ಭಕ್ತರ ಆಗಮನ
.

ವರದಿಕಿರಣ್ ಕೋಟ್ಯಾನ್ ಕೇಪು.

ತುಳುನಾಡು ಅಂದ್ರೆ ವಿಶೇಷ. ಅಲ್ಲಿನ ಆಚರಣೆ, ಪದ್ಧತಿ, ಹಬ್ಬ ಹೀಗೇ ಎಲ್ಲದಕ್ಕೂ ಒಂದು ಇತಿಹಾಸವಿದೆ. ಶ್ರಾವಣ ಮಾಸ ಬಂದ್ರೆ ಸಾಕು ಇಲ್ಲಿ ಹಬ್ಬಗಳ ಸರಮಾಲೆ ಶುರುವಾಗುತ್ತದೆ. ಇದೀಗ ವರವಹಾಲಕ್ಷ್ಮೀ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನಲೆಯಲ್ಲಿ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀಧಾಮ ಕ್ಷೇತ್ರದಲ್ಲೂ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ವರಮಹಾಲಕ್ಷ್ಮಿ ಹಬ್ಬದ ಪೂರ್ವವಾಗಿ ಇಲ್ಲಿ ವಿಶೇಷ ಆಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಒಟ್ಟು 48 ದಿನಗಳ ಕಾಲ ವರಮಾಹಾಲಕ್ಷ್ಮಿ ವೃತವನ್ನು ಇಲ್ಲಿನ ಭಕ್ತಾಧಿಗಳು ಶ್ರದ್ಧಾ- ಭಕ್ತಿಯಿಂದ ಕೈಗೊಳ್ಳುತ್ತಾರೆ. ಒಟ್ಟು 48 ದಿನಗಳ ಕಾಲ ಕ್ಷೇತ್ರದಲ್ಲಿ ನಡೆಯುವ ಸೇವೆಗಳಲ್ಲಿ “ಬಾಲ ಭೋಜನ”ಎಂಬುದು ವಿಶೇಷ ಸೇವೆ. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ಈ ಸೇವೆ ನಡೆಯುತ್ತಿದೆ. ವರ್ಷಂಪ್ರತಿ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ಹಾಗೂ ಮಕ್ಕಳು ಭಾಗವಹಿಸುವದು ಈ ಕ್ಷೇತ್ರದ ಮಹಿಮೆ.

ಪ್ರತಿ ವರ್ಷದಂತೆ ಈ ವರ್ಷವೂ 48 ದಿನಗಳ ಕಾಲ ಕ್ಷೇತ್ರದಲ್ಲಿ ಬಾಲ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಎಲ್ಲ ಕುಟುಂಬಗಳಿಂದ ಮಕ್ಕಳನ್ನು ಇಲ್ಲಿಗೆ ಕರೆತರಲಾಗುತ್ತದೆ. ಪ್ರತಿನಿತ್ಯ ಮಕ್ಕಳಿಗೆ ಬಾಲ ಭೋಜನದ ನಡೆಯುತ್ತೆ. ಮಕ್ಕಳಲ್ಲಿ ಸಂಸ್ಕಾರ ಹಾಗೂ ಸದ್ಗುಣಗಳನ್ನು ಹೇಳಿಕೊಡುವುದು ಈ ಸೇವೆಯ ಉದ್ದೇಶ. ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಈ ಕ್ಷೇತ್ರದಲ್ಲಿ ನಡೆಯುವ ಬಾಲ ಭೋಜನದಲ್ಲಿ ಮಕ್ಕಳು ಪಾಲ್ಗೊಂಡ್ರೆ ಅವರ ಭವಿಷ್ಯ ಉತ್ತಮವಾಗಿರುತ್ತೆ ಎಂಬುವುದು ಭಕ್ತರ ನಂಬಿಕೆ.

ಬಾಲ ಭೋಜನದಲ್ಲಿ ಮಕ್ಕಳು ಅಲ್ಲದೆ ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.ಈ ವರ್ಷ ಕೊರೊನಾ ಸಾಂಕ್ರಾಮಿಕ ರೋಗ ಇದ್ದರೂ ಮಕ್ಕಳು ಸಾಮಾಜಿಕ ಅಂತರ ಕಾಪಾಡಿಕೊಂಡು ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗವಹಿಸಿದ್ದು ವಿಶೇಷ. ಹೀಗಾಗಿ ಕೊರೊನಾ ಸೋಂಕು ತಡೆಗಟ್ಟವ ನಿಟ್ಟಿನಲ್ಲಿ ಆಯುರ್ವೇದ ಕಷಾಯವನ್ನು ಮಾಡಿ ಕೊಡಲಾಯಿತು.

ಇನ್ನು ಮಾಣಿಲ ಗ್ರಾಮದಲ್ಲಿ ಎಲ್ಲ ಮಕ್ಕಳು ಇಲ್ಲಿ ವರಮಹಾಲಕ್ಷ್ಮಿ ವಿಶೇಷ ದಿನಗಳಲ್ಲಿ ಬಾಲ ಭೋಜನದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕ್ಷೇತ್ರದ ವಿಶೇಷ ಕೂಡ.’ದೀಕ್ಷಾ ‘ ಎಂಬ ಕಾಲೇಜ್ ಹುಡುಗಿ ಹೇಳುವಾ ಪ್ರಕಾರ ನಾನು ಒಂದನೇ ಕ್ಲಾಸ್ ನಿಂದ ಇಲ್ಲಿಯವರೆಗೆ ತಪ್ಪದೇ, ಪ್ರತಿ ವರ್ಷ ಬಾಲ ಭೋಜನ ದಲ್ಲಿ ಪಾಲ್ಗೊಂಡು ನನ್ನ ಸಂಸ್ಕಾರ ಹಾಗೂ ಸದ್ಗುಣಗಳನ್ನು ಬೆಳೆಸಲು ಪ್ರೇರಣೆಯನ್ನು ಈ ಕ್ಷೇತ್ರ ಕಲಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿತ್ಯಾನಂದ ಹಾಕಿ ಕೊಟ್ಟಂತಹ ಸಿದ್ದಾಂತ ತತ್ವದಲ್ಲಿ ಬಾಲಭೋಜನ ಪ್ರಕ್ರೀಯೆ ಕ್ಷೇತ್ರದಲ್ಲಿ ನಡೆಯಿತು.ವರಮಹಾಲಕ್ಷ್ಮಿಯ 48 ದಿವಸ ಕಾರ್ಯಕ್ರಮದಲ್ಲಿ ಇದೊಂದು ಔಚಿತ್ಯಪೂರ್ಣ ಕಾರ್ಯಕ್ರಮ.48 ದಿವಸವೂ ಊರ ಹಾಗು ಪರ ಊರ ಭಕ್ತರು ಈ ಬಾಲಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.ನಿತ್ಯಾನಂದ ಸ್ವಾಮೀಜಿಯ ದೃಷ್ಟಿಕೋನ ವ್ಯಕ್ತಿತ್ವದಿಂದ ಬಾಲಭೋಜನ ಪ್ರಾರಂಭ ಮಾಡಿತು.ಮಕ್ಕಳಿಗೆ ಕಲಿಯುದಕ್ಕೆ ಮತ್ತು ಒಳ್ಳೆಯ ರೀತಿಯ ಅನ್ವಯವನ್ನು ಕೊಡುತ್ತದೆ. ಕಳೆದ 21 ವರ್ಷಗಳಿಂದ ಮಕ್ಕಳು ಬಾಲಭೋಜನದಲ್ಲಿ ಭಾಗವಹಿಸಿದ ಮಕ್ಕಳ ಸಂಸ್ಕಾರಗಳು ,ಬದುಕು, ಸಾರ್ಥಕತೆಯ ಜೀವನ ಬಹಳಷ್ಟು ಪರಿವರ್ತನೆ ಕಂಡುಕೊಂಡಿದೆ.ಇದು ಇಷ್ಟು ನಾವು ಅಂದುಕೊಂಡಂತಹ ಸತ್ಯ.ಬಾಲ ಭೋಜನದಲ್ಲಿ ಸಾಮೂಹಿಕವಾಗಿ ಎಲ್ಲರೂ ಒಗ್ಗಟ್ಟಾಗಿ ಕುಳಿತು ಬಹಳ ಪ್ರೀತಿಯಿಂದ ಭಾಗವಹಿಸುತ್ತಾರೆ.”

ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ 

- Advertisement -

Related news

error: Content is protected !!