Thursday, May 2, 2024
spot_imgspot_img
spot_imgspot_img

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ಶ್ರೀದತ್ತ ಜಯಂತಿ ಮಹೋತ್ಸವ- ಶ್ರೀದತ್ತ ಮಹಾಯಾಗ ಸಪ್ತಾಹ

- Advertisement -G L Acharya panikkar
- Advertisement -

ಒಡಿಯೂರು: ಡಿಸೆಂಬರ್‌ 20 ರಿಂದ 26 ರ ತನಕ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ- ಶ್ರೀದತ್ತ ಮಹಾಯಾಗ ಸಪ್ತಾಹನಡೆಯಲಿದೆ.

20-12-2023 ರಂದು ಪ್ರಾತಃಕಾಲ: ದೀಪಾರಾಧನೆ, ಶ್ರೀ ಗಣಪತಿ ಹವನ, ಶ್ರೀದತ್ತ ಮಹಾಯಾಗ ಸಪ್ತಾಹ ಆರಂಭ, ಶ್ರೀ ದತ್ತಮಾಲಾಧಾರಣೆ, ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಆರಂಭ. ಸಂಜೆ ಶ್ರೀ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ ಜರಗಳಿರುವುದು.

20-12-2023 ರಿಂದ 26-12-2023 ತನಕ ಬೆಳಿಗ್ಗೆ ಘಂ. 9ರಿಂದ ಶ್ರೀ ಗುರುಚರಿತ್ರೆ ವೇದ ಪಾರಾಯಣ, ಬೆಳಿಗ್ಗೆ ಘಂ. 10.30 ‘ಶ್ರೀಮದ್ಭಾಗವತ’ ಪ್ರವಚನ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಇವರು ಮಾಡಲಿದ್ದಾರೆ. ಮಧ್ಯಾಹ್ನ ಗಂಟೆ 12.30 ರಿಂದ ಮಹಾಪೂಜೆ, ಪ್ರಸಾದವಿತರಣೆ ನಂತರ ಅನ್ನಸಂತರ್ಪಣೆಯು ನಡೆಯಲಿರುವುದು.

ಮಧ್ಯಾಹ್ನ ಗಂಟೆ 2ರಿಂದ ಯಕ್ಷಗಾನ ತಾಳಮದ್ದಳೆ ಇರುತ್ತದೆ. ರಾತ್ರಿ ಗಂಟೆ 7ರಿಂದ ರಂಗಪೂಜೆ ಬಳಿಕ ಬೆಳ್ಳಿರಥೋತ್ಸವ ಜರಗಳಿರುವುದು.

26-12-2023 ರಂದು ಬೆಳಿಗ್ಗೆ ಗಂಟೆ 9ರಿಂದ ಶ್ರೀ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನಾ ಶೋಭಾಯಾತ್ರೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿಯವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಲಿದೆ.

ಈ ಸಂದರ್ಭದಲ್ಲಿ ನವನೀತ ಶೆಟ್ಟಿ ಕದ್ರಿ, ಖ್ಯಾತ ನಿರೂಪಕರು ಹಾಗೂ ಕಲಾವಿದರು ಸಹಕಾರಿ ರತ್ನ ಶ್ರೀ ಎ. ಸುರೇಶ್ ರೈ ಅಧ್ಯಕ್ಷರು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ.
ಗಣಪತಿ ಭಟ್ ಸೇರಾಜೆ, ಪ್ರಗತಿಪರ ಕೃಷಿಕರು ಹಾಗೂ ಸಂಚಾಲಕರು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ
ಪಿ. ಲಿಂಗಪ್ಪ ಗೌಡ, ಪ್ರಗತಿಪರ ಕೃಷಿಕರು ಹಾಗೂ ಅಧ್ಯಕ್ಷರು, ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ. ಉಪಾಧ್ಯಕ್ಷರು, ಒಡಿಯೂರು ಶ್ರೀ ವಿವಿಧೋದ್ದೇಶ ಸೌ. ಸಹಕಾರಿ ಸಂಘ ನಿ. , ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು ಆಡಳಿತ ನಿರ್ದೇಶಕರು, ಭಾರತಿ ಬಿಲ್ಡರ್ಸ್ & ಡೆವೆಲಪರ್, ಬಿಡ್ಡೆ, ಮಂಗಳೂರು ನಿರ್ದೇಶಕರು, ಒಡಿಯೂರು ಶ್ರೀ ವಿವಿಧೋದ್ದೇಶ ಸೌ. ಸಹಕಾರಿ ಸಂಘ ನಿ. ಇವರುಗಳಿಗೆ ಶ್ರೀಗುರುದೇವಾನುಗ್ರಹ ಪುರಸ್ಕಾರ ನೀಡಲಾಗುವುದು.

ಮಧ್ಯಾಹ್ನ ಗಂಟೆ 12ರಿಂದ ವೇದ ಪಾರಾಯಣ, ಶ್ರೀಗುರುಚರಿತ್ರೆ ಪಾರಾಯಣ ಸಮಾಪ್ತಿ, ಶ್ರೀದತ್ತ ಮಹಾಯಾಗದ ಪೂರ್ಣಾಹುತಿ, ಕಲ್ಲೋಕ್ತ ಪೂಜೆ, ಮಹಾಪೂಜೆ, ಮಂತ್ರಾಕ್ಷತೆ ಬಳಿಕ ಮಹಾಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 7.00ರಿಂದ ರಂಗಪೂಜೆ, ಬೆಳ್ಳಿರಥೋತ್ಸವ, ಉಯ್ಯಾಲೆ ಸೇವೆಯು ಜರಗಳಿರುವುದು, ರಾತ್ರಿ ಗಂ.9.30ರಿಂದ ‘ಪವನ ಕಲಾವಿದೆರ್ ಕುಡ್ಲ’ ಅಭಿನಯ ಮಲ್ಪುನ “ತೂಯಿಲೆಕ ಅತ್” ಹಾಸ್ಯಮಯ ನಾಟಕ ಜರಗಳಿರುವುದು.

- Advertisement -

Related news

error: Content is protected !!