Saturday, April 27, 2024
spot_imgspot_img
spot_imgspot_img

ಎಸ್ಸೆಸ್ಸೆಫ್ ನೇರಳಕಟ್ಟೆ ಯುನಿಟ್ ಮಹಾಸಭೆ, ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸ‌ಅದಿ ಆಯ್ಕೆ

- Advertisement -G L Acharya panikkar
- Advertisement -

ಮಾಣಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ (ರಿ.)ಇದರ ನೇರಳಕಟ್ಟೆ ಯುನಿಟ್ ಮಹಾಸಭೆಯು ಬದ್ರಿಯಾ ಮಂಝಿಲ್ ನೆಡ್ಯಾಲ್‌ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಯುನಿಟ್ ಅಧ್ಯಕ್ಷರಾದ ಮುಹಮ್ಮದ್ ಇರ್ಶಾದ್ ಸ‌ಅದಿ ವಹಿಸಿದರು.ಎಸ್‌ವೈಎಸ್ ನಾಯಕರಾದ ಇಸ್ಮಾಯಿಲ್ ಮದನಿ ನೇರಳಕಟ್ಟೆರವರು ದುಆಃ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಎಸ್‌ವೈಎಸ್ ಹಿರಿಯ ನಾಯಕರಾದ ಹುಸೈನ್ ಮದನಿ ಉಸ್ತಾದರು ಸಭೆಯನ್ನು ಉದ್ಘಾಟಿಸಿದರು.

ಎಸ್‌ವೈಎಸ್ ನೇರಳಕಟ್ಟೆ ಬ್ರಾಂಚ್ ಅಧ್ಯಕ್ಷರಾದ ಮುಹಮ್ಮದ್ ನಾಸೀರ್ ಸ‌ಅದಿ ಸಂಘಟನಾ ತರಗತಿ ನಡೆಸಿಕೊಟ್ಟರು. ಎಸ್ಸೆಸ್ಸೆಫ್ ನೇರಳಕಟ್ಟೆ ಯುನಿಟ್ ಪ್ರಧಾನ ಕಾರ್ಯದರ್ಶಿ ಜಮಾಲ್ ಝುಹ್ರಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ‌ನಿಂದ ಆಗಮಿಸಿದ ವೀಕ್ಷಕರಾದ ಸಯ್ಯಿದ್ ಸಾಬಿತ್ ತಂಙಳ್ ಸಖಾಫಿ ಅಲ್ ಮುಈನಿ ಹಾಗೂ ಸ್ವಾದಿಖ್ ಸಖಾಫಿ ಅಲ್ ಮುಈನಿ ಗಡಿಯಾರ್ ರವರು 2020-21 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಿದರು.ಅದರಂತೆ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸ‌ಅದಿ ನೇರಳಕಟ್ಟೆ,ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಮಿ‌ಖ್‌ದಾದ್, ಕೋಶಾಧಿಕಾರಿಯಾಗಿ ಜಮಾಲ್ ಝುಹ್ರಿ ನೇರಳಕಟ್ಟೆ, ಉಪಾಧ್ಯಕ್ಷರಾಗಿ ಮುಹಮ್ಮದ್ ಇರ್ಶಾದ್ ಸ‌ಅದಿ ನೆಡ್ಯಾಲ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ನೌಶಾದ್ ಹನೀಫಿ ನೇರಳಕಟ್ಟೆ,ಜೊತೆ ಕಾರ್ಯದರ್ಶಿಯಾಗಿ ಇರ್ಶಾದ್ ಇಂದಿರಾನಗರ,ಸೆಕ್ಟರ್ ಕೌನ್ಸಿಲರುಗಳಾಗಿ ಅಬ್ದುಲ್ ಲತೀಫ್ ಸ‌ಅದಿ,ಮುಹಮ್ಮದ್ ಇರ್ಶಾದ್ ಸ‌ಅದಿ,ಯೂಸುಫ್ ಮಿ‌ಖ್‌ದಾದ್,ಜಮಾಲ್ ಝುಹ್ರಿ,ಇರ್ಶಾದ್ ಇಂದಿರಾನಗರ.

ಸದಸ್ಯರುಗಳಾಗಿ ಮುಹಮ್ಮದ್ ಅಬೂಬಕ್ಕರ್ ನಖೀಬ್, ಮುಹಮ್ಮದ್ ಸಲೀತ್, ಮುಹಮ್ಮದ್ ನು‌ಅ್‌ಮಾನ್, ಮುಹಮ್ಮದ್ ಝಾಹಿದ್ ಪಂತಡ್ಕ, ಇಜಾಝ್ ಇಂದಿರಾನಗರ,ಅಫ್ರೀದ್ ಇಂದಿರಾನಗರ,ಹಾರೀಸ್ ಪರ್ಲೋಟು,ತಮೀಮ್ ಪರ್ಲೋಟು,ಹಾಶಿಂ ಪರ್ಲೋಟು,ರಿಝ್ವಾನ್ ಪರ್ಲೋಟುರವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಎಸ್‌ವೈಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಸೆಕ್ಟರ್ ನಾಯಕರಾದ ಖಲಂದರ್ ಪಾಟ್ರಕೋಡಿ ಹಾಗೂ ಸಿದ್ದೀಖ್ ಪೆರ್ನೆ ಉಪಸ್ಥಿತರಿದ್ದರು.
ಅಬ್ದುಲ್ ಲತೀಫ್ ಸ‌ಅದಿ ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಯೂಸುಫ್ ಮಿ‌ಖ್‌ದಾದ್ ಧನ್ಯವಾದಗೈದರು.

- Advertisement -

Related news

error: Content is protected !!