Monday, May 6, 2024
spot_imgspot_img
spot_imgspot_img

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಡೇಟ್ ಫಿಕ್ಸ್; ಶಾಲಾ ಆರಂಭ ಸದ್ಯಕಿಲ್ಲ

- Advertisement -G L Acharya panikkar
- Advertisement -

ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಬುಡಮೇಲಾಗಿದ್ದು ಶಿಕ್ಷಣದ ಪ್ರಮುಖ ಘಟ್ಟವೆನಿಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಲಾಗಿತ್ತು. ಏಪ್ರಿಲ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಈ ಪರೀಕ್ಷೆ ಕೋವಿಡ್ 2ನೇ ಅಲೆಯ ಹಿನ್ನಲೆ ಮುಂದೂಡಲಾಗಿತ್ತು. ಈಗ ಶಿಕ್ಷಣ ಸಚಿವರು ಡಿಸಿ ಹಾಗೂ ಸಿಇಓ ಗಳ ಜೊತೆ ಸಭೆ ನಡೆಸಿದ್ದು 2 ದಿನ ಪರೀಕ್ಷೆ ನಡೆಯಲಿದೆ.

ಜುಲೈ 19 ರಂದು ಕೋರ್ ಸಬ್ಜೆಕ್ಟ್, ಜುಲೈ 22 ರಂದು ಭಾಷಾವಾರು ವಿಷಯಗಳ ಪರೀಕ್ಷೆ ನಡೆಯಲಿದೆ. ಒ ಎಮ್ ಆರ್ ಶೀಟ್ ನಲ್ಲಿ ಉತ್ತರ ಭರ್ತಿ ಮಾಡಬೇಕು. ಪರೀಕ್ಷೆ ಸಮಯ ಬೆಳಗ್ಗೆ 10:30 ರಿಂದ ಮಧ್ಯಾಹ್ನ 01:30 ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಒಂದು ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಕುಳಿತುಕೊಳ್ಳಬಹುದು. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗಷ್ಟೆ ಕುಳಿತುಕೊಳ್ಳಲು ಅವಕಾಶ. ಜೂನ್ 30ಕ್ಕೆ ಪರೀಕ್ಷಾ ಹಾಲ್ ಟಿಕೆಟ್ ವಿತರಣೆ.

ಮಕ್ಕಳಿಗೆ ಯಾವುದೇ ರೀತಿಯ ಒತ್ತಡವಿಲ್ಲದೆ ನಿರಾಂತಕವಾಗಿ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ. ನಾಡ ಹಬ್ಬದಂತೆ ಪರೀಕ್ಷೆ ನಡೆಸಲು ಡಿಸಿಗಳಿಗೆ ಸಲಹೆ ನೀಡಿದ್ದಾರೆ. 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 73,066 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ

- Advertisement -

Related news

error: Content is protected !!