Tuesday, June 9, 2026
spot_imgspot_img
spot_imgspot_img

ವಿಟ್ಲ: ಬೊಬ್ಬೆಕೇರಿ ರಸ್ತೆಯಲ್ಲಿ ನಿಂತ ಮಳೆನೀರು:ವಾಹನ ಸವಾರರು, ಪಾದಾಚಾರಿಗಳ ಪರದಾಟ- ಸಾರ್ವಜನಿಕರ ಆಕ್ರೋಶ

- Advertisement -
- Advertisement -

ಚರಂಡಿ ಕಾಮಗಾರಿ ಸ್ಥಗಿತಗೊಂಡ ಬಗ್ಗೆ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ ಪ್ರತಿಕ್ರಿಯೆ

ವಿಟ್ಲ ಭಾಗದಲ್ಲಿ ಬೆಳಗ್ಗಿನಿಂದಲೇ ಹನಿ ಹನಿ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಂಗಳೂರು ವಿಟ್ಲ ರಸ್ತೆಯ ಬೊಬ್ಬೆಕೇರಿ ಬಲಿ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆ ಇಲ್ಲದೆ, ಮಳೆ ನೀರು ಚರಂಡಿ ನೀರು ರಸ್ತೆ ಮೇಲೆ ಹರಿದು ರಸ್ತೆ ಜಲಾವೃತಗೊಂಡಿತ್ತು. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಹಾಗೂ ರಸ್ತೆ ಬದಿಯಲ್ಲಿ ಹೋಗುವ ಪಾದಾಚಾರಿಗಳ ಕಷ್ಟವನ್ನು ಮನಗಂಡು ಈ ಬಗ್ಗೆ ಈ ಸಮಸ್ಯೆಗೆ ಯಾರು ಹೊಣೆ ಎಂಬಂತೆ ಸಾರ್ವಜನಿಕರ ಆಕ್ರೋಶದ ಮೇರೆಗೆ ಪಟ್ಟಣ ಪಂಚಾಯತ್ ಬಳಿ ಪ್ರಶ್ನೆ ಮಾಡಿ ವರದಿ ಮಾಡಲಾಗಿತ್ತು.

ಈ ಬಗ್ಗೆ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ಕುಮಾರ್ ವಿಟ್ಲ ಪ್ರತಿಕ್ರಿಯಿಸಿದ್ದು, ‘ ಚರಂಡಿ ವ್ಯವಸ್ಥೆ ನಿರ್ಮಾಣ ಕಾರ್ಯ ಮಾಡುವ ವೇಳೆ ಬೊಬ್ಬೆಕೇರಿ ಸಮೀಪದ ಜಾಗದ ಮಾಲಿಕರು ತಮ್ಮ ಜಾಗಕ್ಕೆ ಸಂಬಂಧ ಪಟ್ಟಂತೆ ಚರಂಡಿ ನಿರ್ಮಾಣ ಕಾರ್ಯಕ್ಕೆ ತಡೆ ಮಾಡಿದ್ದು, ಈ ಬಗ್ಗೆ ಕೋರ್ಟ್ ನಿಂದ ತಡೆಯಾಜ್ಞೆ ಬಂದಿರುತ್ತದೆ. ಆದ ಕಾರಣ ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

- Advertisement -

Related news

error: Content is protected !!