Saturday, April 20, 2024
spot_imgspot_img
spot_imgspot_img

“ಸ್ವಸ್ತಿಕ್ ಟ್ರೋಫಿ” ತನ್ನದಾಗಿಸಿಕೊಂಡ ಜಯಕರ್ನಾಟಕ ಜನಪರ ವೇದಿಕೆ ತಂಡ.

- Advertisement -G L Acharya panikkar
- Advertisement -

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ “ಸ್ವಸ್ತಿಕ್ ಟ್ರೋಫಿ” ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವು ಇಂದು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಿತು.

ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವು ಇಂದು ಬೆಳಿಗ್ಗೆ ನಡೆಯಿತು. ಒಟ್ಟು 18 ತಂಡಗಳು ಪೈಪೋಟಿಯಲ್ಲಿ ಭಾಗವಹಿಸಿದ್ದು.ಪ್ರಥಮ ಸ್ಥಾನವನ್ನು ಜಯಕರ್ನಾಟಕ ಜನಪರ ವೇದಿಕೆ ವಿಟ್ಲ ಪಡೆದಿದೆ.

ದ್ವಿತೀಯ ಸ್ಥಾನವನ್ನು ವಿಜಿಎಫ್ ವಿಟ್ಲ ಮತ್ತು ತೃತೀಯ ಸ್ಥಾನವನ್ನು ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಪಡೆದಿದೆ. ಮತ್ತು ಚತುರ್ಥ ಸ್ಥಾನವನ್ನು ಫ್ರೆಂಡ್ಸ್ ಪಂಜಳ ತಂಡ ಪಡೆದಿದ್ದು ವಿಜೇತರಿಗೆ ಬಹುಮಾನ ಧನವನ್ನು ಮತ್ತು ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.

ಹರೀಶ್ ವಿಟ್ಲ ಮತ್ತು ಶ್ರೀನಿವಾಸ್ ರವರು ಪಂದ್ಯದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಜಗನ್ನಾಥ ಕಾಸರಗೋಡು, ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಎಂ ವಿಟ್ಲ, ಮುಸ್ತಫಾ ಕಲ್ಲಡ್ಕ, ಅಬಕಾರಿ ಇಲಾಖೆ ನವೀನ್, ಡಾ.ಎಚ್ ಸುಬ್ರಹ್ಮಣ್ಯ, ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಕೊರೋನ ಸಮಯದಲ್ಲಿ ಜನರಿಗಾಗಿ ಆರೋಗ್ಯ ಸೇವೆ ನೀಡಿದ ವಿಟ್ಲದ ಖ್ಯಾತ ವೈದ್ಯರಾದ ವಿ.ಕೆ.ಹೆಗ್ಡೆ ಯವರನ್ನು ಸನ್ಮಾನಿಸಲಾಯಿತು.


ನಾಗೇಶ ಬಸವನಗುಡಿ, ಪ್ರಕಾಶ್ ಪಂಚಮಿ
ವಿಶ್ವನಾಥ್ ಅಳಿಕೆ,ಸುದರ್ಶನ್, ಜೀವನ್, ತಾರಾನಾಥ್ ಮತ್ತು ಸ್ವಸ್ತಿಕ್ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಹರೀಶ್ ವಿಟ್ಲ ಮತ್ತು ಮನ್ಮಥ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದ್ದಾರೆ.

- Advertisement -

Related news

error: Content is protected !!