Saturday, April 27, 2024
spot_imgspot_img
spot_imgspot_img

ಪೂರ್ವ ಲಡಾಖ್​ನಲ್ಲಿ ಚೀನಾ ಸೇನೆ ಹಿಂತೆಗೆತ ಸಾಧ್ಯ- ಆರ್ಮಿ ಚೀಫ್ ಜನರಲ್.

- Advertisement -G L Acharya panikkar
- Advertisement -

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಸೇನೆ ನಿಯೋಜಿಸಿರುವ ಚೀನಾ ಜೊತೆಗೆ ಸೇನೆ ವಾಪಸ್ ಪಡೆಯುವ ಒಪ್ಪಂದ ಸಾಧ್ಯವಾಗಬಹುದು ಎಂದು ಆರ್ಮಿ ಚೀಫ್ ಜನರಲ್ ಎಂ ಎಂ ನರವಾಣೆ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲಸಗಳು ನಡೆಯುತ್ತಿವೆ. ಎರಡೂ ದೇಶಗಳಿಗೆ ಒಪ್ಪಿಗೆಯಾಗಬಹುದಾದ ಒಪ್ಪಂದಕ್ಕೆ ನಾವು ಬರಬಹುದು ಎಂದಿದ್ದಾರೆ.

ನವೆಂಬರ್ 6 ರಂದು ನಡೆದ ಎಂಟನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಯ ನಂತರ ಇದೀಗ ಒಂಭತ್ತನೇ ಸುತ್ತಿನಲ್ಲಿ ಚೀನಾ ಪ್ಯಾಂಗಾಂಗ್ ತ್ಸೋ ಮತ್ತು ಚುಶುಲ್ ಏರಿಯಾ ಸೇರಿದಂತೆ ಎಲ್ಲ ಘರ್ಷಣಾ ಪ್ರದೇಶಗಳ ಕುರಿತು ಮಾತುಕತೆಗೆ ಒಪ್ಪಿದೆ ಎನ್ನಲಾಗಿದೆ.
ಇನ್ನು ಇದೇ ವೇಳೆ ಸೇನೆಗೆ ಚಳಿಗಾಲಕ್ಕೆ ಬೇಕಾದ ಅಗತ್ಯ ಬಟ್ಟೆ, ವಸ್ತುಗಳನ್ನು ನೀಡುವಲ್ಲಿ ಶಾರ್ಟೇಜ್ ಆಗಿದೆ​ ಎನ್ನುವ ವಿಚಾರವನ್ನು ಅಲ್ಲಗಳೆದ ನರವಾಣೆ, ಎಲ್ಲ ಸೇನಾ ಪಡೆಗಳೂ ಅತ್ಯಾಧುನಿಕ, ನೂತನ ಬಟ್ಟೆಗಳನ್ನು, ಸಾಧನಗಳನ್ನು ಮತ್ತು ಆಯುಧಗಳನ್ನು ಹೊಂದಿವೆ. ಇದರಲ್ಲಿ ಯಾವುದೇ ಕೊರತೆಯಾಗಿಲ್ಲ ಎಂದು ಹೇಳಿದ್ದಾರೆ.

- Advertisement -

Related news

error: Content is protected !!