Saturday, April 27, 2024
spot_imgspot_img
spot_imgspot_img

ಮಂಗಳೂರು: ಕೇರಳದಿಂದ ಮಂಗಳೂರು ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಯಮ ಜಾರಿ

- Advertisement -G L Acharya panikkar
- Advertisement -

ಮಂಗಳೂರು: ಕೇರಳದಿಂದ ಮಂಗಳೂರು ಪ್ರವೇಶಕ್ಕೆ ದ.ಕ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.

ಕೇರಳಿಗರು ಮಂಗಳೂರು ಪ್ರವೇಶಕ್ಕೆ ನಾಲ್ಕು ಗಡಿ ಭಾಗದಲ್ಲಷ್ಟೇ ಅವಕಾಶವಿದೆ. ತಲಪಾಡಿ, ಸಾರಡ್ಕ, ಮೇಣಾಲ, ಜಾಲ್ಸೂರು ಹೊರತುಪಡಿಸಿ ಉಳಿದ ಗಡಿಗಳು ಬಂದ್ ಮಾಡಲಾಗುವುದು.

ನಿತ್ಯ ಪ್ರಯಾಣಿಕರು ಹೊರತುಪಡಿಸಿ ಉಳಿದವರಿಗೆ 72 ಗಂಟೆ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ .ಬಸ್ ಗಳಲ್ಲಿ ಪ್ರಯಾಣಿಸುವವರು ನೆಗೆಟಿವ್ ರಿಪೋರ್ಟ್ ಹೊಂದಿದ್ದರಷ್ಟೇ ಪ್ರಯಾಣಕ್ಕೆ ಅವಕಾಶವಿದೆ.

ನಿತ್ಯ ಪ್ರಯಾಣಿಕರು 15 ದಿನಕ್ಕೊಮ್ಮೆ ನೆಗೆಟಿವ್ ವರದಿ ಚೆಕ್ ಪೋಸ್ಟ್ ಗಳಲ್ಲಿ ಸಲ್ಲಿಸಬೇಕು.ನಿತ್ಯ ಪ್ರಯಾಣದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಈ ನಿಯಮ ಅನ್ವಯವಾಗುತ್ತದೆ.

ಕೇರಳದಿಂದ ಬರುವ ಅಂಬ್ಯುಲೆನ್ಸ್ ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ನಾಲ್ಕೂ ಚೆಕ್ ಪೋಸ್ಟ್ ಗಳಲ್ಲಿ ಪ್ರಯಾಣಿಕರ ತಪಾಸಣೆಗೆ ವೈದ್ಯರು ಮತ್ತು ಪೊಲೀಸರ ತಂಡವನ್ನು ನೇಮಿಸಲಾಗಿದೆ.

ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ರ್ಯಾಂಡಮ್ ಟೆಸ್ಟ್ ಕಡ್ಡಾಯವಾಗಿದೆ.

- Advertisement -

Related news

error: Content is protected !!