Sunday, July 19, 2026
spot_imgspot_img
spot_imgspot_img

ಕಡಬ: ಪತ್ನಿಗಿತ್ತು ಗೆಳೆಯನ ಸಂಪರ್ಕ – ಮನನೊಂದು ವಿಷ ಸೇವಿಸಿದ್ದ ಗ್ಯಾರೇಜ್ ಮಾಲೀಕ ಸಾವು

- Advertisement -
- Advertisement -

ಕಡಬ: ಕುಟುಂಬ ಕಲಹದಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ ರಾಕೇಶ್ (36) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಡಬ ಕುಟ್ರುಪ್ಪಾಡಿ ನಿವಾಸಿ ಸೊಲೊಮನ್(54) ಅವರ ದೂರಿನ ಪ್ರಕಾರ, ರಾಕೇಶ್ ಕಡಬ ಕಳಾರ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ನಡೆಸುತ್ತಿದ್ದು, ಆತನ ಪತ್ನಿಯು ಆತನ ಗೆಳೆಯನೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿರುವುದನ್ನು ಗಮನಿಸಿದ ಬಳಿಕ ರಾಕೇಶ್ ಮಾನಸಿಕವಾಗಿ ಬಹಳ ಕುಗ್ಗಿಹೋಗಿದ್ದನು.

ಈ ಮನಸ್ತಾಪದ ಹಿನ್ನೆಲೆಯಲ್ಲಿ ನ.19ರಂದು ಸಂಜೆ ಕಡಬ ಬಜಾಜ್ ಶೋ ರೂಂ ಹಿಂಭಾಗದಲ್ಲಿ ಅಮಲು ಪದಾರ್ಥ ಮಿಶ್ರಿತ ಇಲಿಪಾಷಾನ ಸೇವಿಸಿ ರಾಕೇಶ್ ಆತ್ಮಹತ್ಯೆಗೆ ಯತ್ನಿಸಿದ್ದನು. ಸ್ಥಳೀಯರು ತಕ್ಷಣವೇ ರಾಕೇಶ್ ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾ.ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರು.

ಅಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ನ.26ರಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!