- Advertisement -
- Advertisement -
ಜೆಸಿಐ ವಿಟ್ಲದ “ಸಪ್ತಾಹ 2024” 3ನೇ ದಿನದ ಕಾರ್ಯಕ್ರಮ ಸುಧಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಪರಿಸರ ಜಾಗೃತಿ ಅಡಿಯಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಮಾಹಿತಿ ಕಾರ್ಯಕ್ರಮ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಜೆಸಿಐ ಪೂರ್ವ ಅಧ್ಯಕ್ಷರು, ರೋಟರಿ ಸಂಸ್ಥೆ ವಿಟ್ಲದ ಪೂರ್ವ ಅಧ್ಯಕ್ಷರು, ಉಪನ್ಯಾಸಕರು ಆದ ಜೇಸಿ ಅಣ್ಣಪ್ಪ ಸಾಸ್ಥಾನ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಕಾಲೇಜು ಮಕ್ಕಳಿಗೆ ಮಾಹಿತಿ ಕಾರ್ಯಕ್ರಮವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ. ಸಂತೋಷ್ ಶೆಟ್ಟಿ ಪೆಲತಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆಸಿಐ ಪೂರ್ವ ಅಧ್ಯಕ್ಷರುಗಳಾದ ಜೇಸಿ. ರಮೇಶ್ ಬಿ. ಕೆ ಹಾಗೂ ಜೇಸಿ. ಚಂದ್ರಹಾಸ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಮುಕುಂದ ಸರ್,ಉಪಸ್ಥಿತರಿದ್ದರು. ಕಾರ್ಯದರ್ಶಿ ಜೇಸಿ ಮುರಳಿಪ್ರಸಾದ್, ಕೋಶಾಧಿಕಾರಿ ಜೇಸಿ ಲುವಿಸ್ ಮಸ್ಕರೇನಸ್ ಹಾಗೂ ಕಾರ್ಯಕ್ರಮ ನಿರ್ದೇಶಕರು ಆದ ಜೇಸಿ ಆರ್ಥಿಕ್ ಸಹಕರಿಸಿದರು.
- Advertisement -