

ಮಂಗಳೂರು : ಸೋಷಿಯಲ್ ಮೀಡಿಯಾದಿಂದ ಯುವಸಮೂಹದ ಮೇಲೆ ಆಗುತ್ತಿರುವ ಪರಿಣಾಮಗಳು ಅಷ್ಟಿಷ್ಟಲ್ಲ. ಅದೆಷ್ಟೋ ಕುಟುಂಬಗಳು ಒಡೆದು ಹೋದ ನಿದರ್ಶನಗಳೂ ಇದೆ. ಈಗ ಹೇಳುತ್ತಿರುವ ಸುದ್ದಿ ಕೂಡಾ ಅಂಥದ್ದೇನೆ. ಇನ್‌ಸ್ಟಾಗ್ರಾಮ್‌ನಲ್ಲಿ ಬೇರೆ ಯುವತಿಯ ಫೋಟೋಗೆ ಲೈಕ್ ಒತ್ತಿದ ಕಾರಣಕ್ಕೆ ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಕೆ ಗಲಾಟೆ ಮಾಡಿದಳು ಅಂತ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕುಕ್ಕಿಪಾಡಿಯಲ್ಲಿ. ದೈವಪಾತ್ರಿಯಾಗಿದ್ದ ಚೇತನ್(೨೫) ಮೃತ ಯುವಕ.
ಮಂಗಳೂರಿನ ಚೈತನ್ಯಾ ಎಂಬಾಕೆ ಚೇತನ್‌ಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಾಳೆ. ಇಬ್ಬರಲ್ಲಿ ಪ್ರೀತಿ ಬೆಳೆದು 8 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜ.21ರಂದು ಬೆಳಗ್ಗೆ ಚೇತನ್ ಮನೆಗೆ ಚೈತನ್ಯಾ ಬಂದಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಬೇರೆ ಯುವತಿ ಪೋಸ್ಟ್‌ಗೆ ಲೈಕ್ ಮಾಡಿದ್ದಕ್ಕೆ ಚೇತನ್ ಜೊತೆ ಗಲಾಟೆ ಮಾಡಿಕೊಂಡಿದ್ದಾಳೆ. ಇದರಿಂದ ನೊಂದ ಚೇತನ್ ಕೋಣೆಯಲ್ಲಿ ಲು೦ಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ೦ದು ತಿಳಿದುಬಂದಿದೆ.ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.