Monday, July 20, 2026
spot_imgspot_img
spot_imgspot_img

ಬಂಟ್ವಾಳ: ಅಮ್ಟಾಡಿ ನಿವಾಸಿ ಜೀವನ್ ತಾವರೋ ಆತ್ಮಹತ್ಯೆ – ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ನಿವಾಸಿ ಜೀವನ್ ತಾವರೋ ಎಂಬವರು ದಿನಾಂಕ: 10.2.2025 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ. ಕ್ರ 14/2025 ಕಲಂ 108, 318 ಬಿ ಎನ್ ಎಸ್ ರಂತೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣದಲ್ಲಿ ತನಿಖೆ ನಡೆಸಲಾಗಿ, ದಿನಾಂಕ 05.04.2025 ರಂದು ಆರೋಪಿಗಳಾದ ಕುರಿಯಾಳ ಗ್ರಾಮ ಬಂಟ್ವಾಳ ನಿವಾಸಿ ಪ್ರವೀಣ್ ಡೆಸಾ ಮತ್ತು ಸೋರ್ನಾಡು ಗ್ರಾಮ, ಬಂಟ್ವಾಳ ನಿವಾಸಿ ರೋಹನ್ ಪಿಂಟೋ ಎಂಬವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

- Advertisement -

Related news

error: Content is protected !!