ಮಂಗಳೂರು :-ಶ್ರೀ ಕಾಶೀ ಮಠ ಸಂಸ್ಥಾನದ 19 ೧೯ ನೇ ಯತಿವರ್ಯರಾದ ಶ್ರೀಮದ್ ಸುಕ್ರ ತಿಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನೆಯು ಇಂದು ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನ ಹಾಗೂ ಅಮೃತ ಹಸ್ತಗಳಿಂದ ನೆರವೇರಿತು.
ಈ ಕಾರ್ಯಕ್ರಮ ಪ್ರಯುಕ್ತ ವಿವಿಧ ಗೊತ್ರೆಯ ವೈಧಿಕ ರು ಮಠಕ್ಕೆ ಆಗಮಿಸಿದ್ದು ಬೆಳಿಗ್ಗೆ ಶ್ರೀಗಳವರ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ , ಶ್ರೀ ದೇವರ ನಿರ್ಮಾಲ್ಯ ಪೂಜೆ ಬಳಿಕ ಸಂಸ್ಥಾನದ ಪ್ರಧಾನ ಆರಾಧ್ಯ ದೇವರಾದ ಶ್ರೀ ವೇದವ್ಯಾಸ ದೇವರಿಗೆ ಶ್ರೀಗಳವರಿಂದ ಪಂಚಾಮೃತ ಅಭಿಷೇಕ , ಗಂಗಾಭಿಷೇಕ , ಪವಮಾನಾಭಿಷೇಕಗಳು ನೆರವೇರಿತು ಬಳಿಕ ಲಘು ವಿಷ್ಣು ಅಭಿಷೇಕ ನೆರವೇರಿತು.ಮಧ್ಯಾನ್ಹ ವಿಶೇಷ ವಾಗಿ ಶ್ರೀಮದ್ ಸುಕ್ರ ತಿಂದ್ರ ತೀರ್ಥ ಸ್ವಾಮೀಜಿಯ ಭಾವಚಿತ್ರಕ್ಕೆ ವಿಶೇಷ ಮಂಗಳಾರತಿ ನಡೆಯಿತು.
ಸಾಯಂಕಾಲ ಸಂಸ್ಥಾನದಲ್ಲಿ ಅತೀ ವಿಶೇಷ ದಿನಗಳಲ್ಲಿ ಶ್ರೀ ದೇವರಿಗೆ ಸ್ವರ್ಣ ಗರುಡ ವಾಹನ ಸೇವೆ ಬಳಿಕ ಶ್ರೀಗಳವರಿಂದ ಗುರುಗುಣಗಾನ ಕಾರ್ಯಕ್ರಮ ಜರಗಿತು .
ಈ ಬಾರಿ ಬಹಳ ಸರಳ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಸಮಾಜ ಬಾಂದವರು ಪಾಲ್ಗೊಳ್ಳಲು ಅವಕಾಶ ವಿರುವುದಿಲ್ಲ . ಇದೇ ಬರುವ ದಿನಾಂಕ 10 -07 – ೨೦೨೦ ರಂದು ಶ್ರೀಗಳವರು ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತ ಸ್ವೀಕಾರ ಮಾಡಲಿರುವರು .