Thursday, June 18, 2026
spot_imgspot_img
spot_imgspot_img

ಸುಳ್ಯ: ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಸಾವು!

- Advertisement -
- Advertisement -

ಸುಳ್ಯ: ಸುಳ್ಯ ತಾಲೂಕಿನ ಕೂಜುಗೋಡು ಕಟ್ಟೆಮನೆಯ ಯುವತಿಯೋರ್ವಳು ರಕ್ತದೊತ್ತಡ ಇಳಿಕೆಯಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ದಿನೇಶ್ ಕೂಜುಗೋಡು ಕಟ್ಟೆಮನೆ ಎಂಬವರ ಪುತ್ರಿ ಪ್ರತೀಕ್ಷಾ (21) ಮೃತ ದುರ್ದೈವಿ. ಅವರು ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದು,ಬೆಂಗಳೂರಿನ ಮನೆಗೆ ಹೋಗಿದ್ದ ಅವರು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ದಿಢೀರ್ ರಕ್ತದೊತ್ತಡಕ್ಕೊಳಗಾದರು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

- Advertisement -

Related news

error: Content is protected !!