Sunday, June 14, 2026
spot_imgspot_img
spot_imgspot_img

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್‌ಗೆ ಗುದ್ದಿದ ಕಾರು..!

- Advertisement -
- Advertisement -

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಮನೆಯ ಕಾಂಪೌಂಡ್ ಗುದ್ದಿದ ಘಟನೆ ಗೂನಡ್ಕ ಬಳಿ ನಡೆದಿದೆ.

ಬೆಂಗಳೂರಿನಿಂದ ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ KL 7 CR 2340 ಕೇರಳದ ಮೂಲದ ವಾಹನ ಗೂನಡ್ಕದ ಶಿರಾಡಿ ಬೈಲೆ ದೈವಸ್ಥಾನಕ್ಕೆ ಹೋಗುವ ದ್ವಾರದ ಬಳಿಯ ತಿರುವಿನಲ್ಲಿ ತಲುಪಿದಾಗ ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ರಹೀಂ ಬೀಜದ ಕಟ್ಟೆ ಅವರ ಮನೆಯ ಕಾಪೌಂಡ್‌ಗೆ ಗುದ್ದಿ ನಿಂತಿತು.

ಪರಿಣಾಮವಾಗಿ ಕಾಂಪೌಂಡ್‌ಗೆ ಹಾನಿಯಾಗಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರಿನವನರು ಮೂಲತಃ ಕೇರಳದ ಕಾಸರಗೋಡಿನವರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!