Monday, June 8, 2026
spot_imgspot_img
spot_imgspot_img

ಸುಳ್ಯ: ಆಧಾರ್ ಕಾರ್ಡ್ ತಿದ್ದುಪಡಿಗೆ ಹೋದ ವ್ಯಕ್ತಿ ಶವವಾಗಿ ಪತ್ತೆ..!!

- Advertisement -
- Advertisement -

ಸುಳ್ಯ: ಆಧಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಸುಳ್ಯದ ಅರಂತೋಡಿಗೆ ತೆರಳಿ ಕಾಣೆಯಾಗಿದ್ದ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದ ಬಾಲಕೃಷ್ಣ ಎಂಬವರು ಶವವಾಗಿ ಪತ್ತೆಯಾಗಿದ್ದಾರೆ.

ಬಾಲಕೃಷ್ಣರವರು ನಾಪತ್ತೆಯಾಗಿರುವ ಬಗ್ಗೆ ಅವರ ಮನೆಯವರು ಆ. 8ರಂದು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಚೆಂಬು ಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ (65) ಅವರು ಅರಂತೋಡಿಗೆ ತೆರಳಿದ್ದರು. ಅಲ್ಲಿಂದ ಸುಳ್ಯ ಕಡೆಗೆ ಬರುವ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಮರಳಿ ಹಿಂತಿರುಗದೆ ಇರುವುದಾಗಿ ತಿಳಿಸಿದ್ದರು.

ಇದೀಗ ಬಾಲಕೃಷ್ಣರವರ ಶವ ಸುಳ್ಯದ ಅರಂಬೂರು ಬಳಿಯಲ್ಲಿ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

- Advertisement -

Related news

error: Content is protected !!