Sunday, June 14, 2026
spot_imgspot_img
spot_imgspot_img

ಹೆಂಡತಿಯನ್ನು ಮನೆಗೆ ಕಳುಹಿಸದ ಅತ್ತೆ; ಚಾಕುವಿನಿಂದ ಇರಿದು ಪರಾರಿಯಾದ ಅಳಿಯ

- Advertisement -
- Advertisement -

ಹೆಂಡತಿಯನ್ನು ಮನೆಗೆ ಕಳುಹಿಸದ ಕಾರಣ ಅಳಿಯನೊಬ್ಬ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ.

ಗೀತಾ ಎಂಬುವರೇ ಅಳಿಯನಿಂದಲೇ ಚಾಕು ಇರಿತಕ್ಕೊಳಾಗಾದವರು. ಆರೋಪಿ ಮನೋಜ್ ಮೂರು ವರ್ಷಗಳ ಹಿಂದೆ ವರ್ಷಿತಾ ಎಂಬಾಕೆಯನ್ನ ಪ್ರೀತಿಸಿ ಮದ್ವೆಯಾಗಿದ್ದನು. ಬಳಿಕ ಗಂಡ ಕೆಲಸ ಮಾಡ್ತಿಲ್ಲ ಅಂತ ವರ್ಷಿತಾ ತವರು ಮನೆ ಸೇರಿದ್ದಳು.

ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಮನೋಜ್ ಕರೆತರಲು ಹೋಗಿದ್ದ. ಈ ವೇಳೆ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅತ್ತೆ ಗೀತಾಗೆ ಅಳಿಯ ಮನೋಜ್ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!