Friday, April 19, 2024
spot_imgspot_img
spot_imgspot_img

ಅಪ್ಪಿಕೋ ಚಳವಳಿಯ ನೇತಾರ ಸುಂದರ್​ಲಾಲ್ ಬಹುಗುಣ ಕೊರೊನಾಗೆ ಬಲಿ

- Advertisement -G L Acharya panikkar
- Advertisement -

ರಿಷಿಕೇಶ್: ಚಿಪ್ಕೋ(ಅಪ್ಪಿಕೋ) ಹೆಸರಿನಲ್ಲಿ ದೊಡ್ಡ ಮಟ್ಟದ ಚಳವಳಿಯೊಂದನ್ನ ಹುಟ್ಟುಹಾಕಿ ಕ್ರಾಂತಿ ಮಾಡಿದ ಪರಿಸರವಾದಿ ಸುಂದರ್​ ಲಾಲ್​ ಬಹುಗುಣ ಇಂದು ಕೊರೊನಾ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ.

94 ವರ್ಷದ ಸುಂದರ್​ಲಾಲ್ ಬಹುಗುಣ ಅವರು ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ಹಿನ್ನೆಲೆ ಅವರನ್ನು ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ರಾತ್ರಿಯಿಂದ ಅವರ ಆರೋಗ್ಯ ಗಂಭೀರವಾಗಿದ್ದು ಆಕ್ಸಿಜನ್ ಮಟ್ಟ ಕುಸಿತ ಕಂಡು ಸಾವನ್ನಪ್ಪಿದರು ಎನ್ನಲಾಗಿದೆ.

ಮರಗಳನ್ನು ಕಡಿಯುವುದರ ವಿರುದ್ಧ ನಡೆದ ಅಪ್ಪಿಕೋ ಚಳವಳಿಯನ್ನು ಆರಂಭಿಸಿದ ಕೀರ್ತಿ ಸುಂದರ್​ಲಾಲ್​​ ಬಹುಗುಣ ಅವರಿಗೆ ಸಲ್ಲುತ್ತದೆ. ಅವರ ಪತ್ನಿ ವಿಮ್ಲಾ ಬಹುಗುಣ ಅವರು ಅಪ್ಪಿಕೋ ಚಳುವಳಿಯನ್ನ ಹುಟ್ಟುಹಾಕಿದ್ದರು ಪತಿ ಸುಂದರ್ ಲಾಲ್ ಬಹುಗುಣ ಚಳವಳಿಯನ್ನ ಕೃತಿಗೆ ಇಳಿಸುವ ಮೂಲಕ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

driving
- Advertisement -

Related news

error: Content is protected !!