Friday, March 29, 2024
spot_imgspot_img
spot_imgspot_img

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ವೀರಾಂಜನೇಯ ವ್ಯಾಯಾಮ ಶಾಲೆ

- Advertisement -G L Acharya panikkar
- Advertisement -

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮಂಗಳೂರಿನ ಸುರತ್ಕಲ್‌ನ ಹೊಸಬೆಟ್ಟುವಿನ ಸಂಸ್ಥೆಯೂ ಭಾಜವಾಗಿದೆ. ಈ ಮೂಲಕ ಹೆಸರನ್ನು ನಾಡಿನೆಲ್ಲೆಡೆ ಪಸರಿಸಿದೆ. ಹೊಸಬೆಟ್ಟುವಿನ ವೀರಾಂಜನೇಯ ವ್ಯಾಯಾಮ ಶಾಲೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.

ಕಳೆದ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ ವೀರಾಂಜನೇಯ ವ್ಯಾಯಾಮ ಶಾಲೆ.

1972 ನೇ ಇಸವಿಯಲ್ಲಿ ಹೊಸಬೆಟ್ಟಿನ ಕಡಂಬೋಡಿ ಎಂಬ ಸ್ಥಳದಲ್ಲಿ ಶಿವಪ್ಪ ಪೂಜಾರಿ ಅವರ ಮನೆಯಲ್ಲಿ ಸಂಕಪಣ್ಣ ಮೇಸ್ಟ್ರು ಅವರ ಹಿರಿತನದಲ್ಲಿ ಆರಂಭವಾಗಿ 1973ನೇ ಇಸವಿಯಲ್ಲಿ ಹೊಸಬೆಟ್ಟು ಗ್ರಾಮಸಂಘದ ಹಿಂಬದಿಯಲ್ಲಿ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹೊಸಬೆಟ್ಟು ಎಂಬ ಹೆಸರಿನಲ್ಲಿ ಮಾ. ಸಂಕಪ್ಪಣ ಅವರು ಗುರುಗಳಾಗಿ ಆರಂಭವಾಯಿತು. ತದನಂತರ 1996ರಲ್ಲಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

೧೯೭೩ರಿಂದ ಇಂದಿನ ತನಕ ಮಧುಸೂದನ್ ರಾವ್‌ ಇವರ ಅಧ್ಯಕ್ಷತೆಯಲ್ಲಿ ಹಾಗೂ ವಿಠ್ಠಲ ದೇವಾಡಿಗ ಮತ್ತು ಲೀಲಾಧರ ಕಡಂಬೋಡಿ ಇವರಿಬ್ಬರು ಗುರುಗಳಾಗಿ ವ್ಯಾಯಾಮ ಕಸರತ್ತನ್ನು ಹಾಗೂ ತಾಲೀಮು ವಿದ್ಯೆಯನ್ನು ಮಕ್ಕಳಿಗೆ ಕಲಿಸುತ್ತಾ 50 ವರ್ಷಗಳ ಕಾಲ ನಿರಂತರ ಕ್ರೀಡಾಸೇವೆ ಮಾಡುತ್ತಾ ಬಂದಿದೆ. ಈ ಹಿನ್ನಲೆ ಸಾಧನೆಯನ್ನು ಗುರುತಿಸಿದ ಜಿಲ್ಲಾಡಳಿತ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

- Advertisement -

Related news

error: Content is protected !!