Tag: Mangalore
ಹಳೆಯಂಗಡಿ: ಆಟೋರಿಕ್ಷಾ, ಬಸ್ ಹಾಗೂ ಲಾರಿಗಳ ನಡುವೆ ಸರಣಿ ಅಪಘಾತ; ಮಹಿಳೆ ಗಂಭೀರ..
ಹಳೆಯಂಗಡಿ: ಆಟೋರಿಕ್ಷಾ, ಬಸ್ ಹಾಗೂ ಲಾರಿಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಸೇತುವೆಯಲ್ಲಿ ಬಳಿ ನಡೆದಿದೆ.
ಮಂಗಳೂರಿನ ನಿವಾಸಿ ಸರಸ್ವತಿ ಗಂಭೀರ...
ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಮೇಳದ ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ವಿಧಿವಶ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಅವರು ಗುರುವಾರ ರಾತ್ರಿ ಕಟೀಲಿನ ಸರಸ್ವತಿ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು.
ಸರಸ್ವತೀ ಸದನದಲ್ಲಿ ಕಟೀಲು...
ಮಂಗಳೂರು: ಅಯ್ಯಪ್ಪ ಮಾಲಾಧಾರಿ ಬಾಲಕನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ವಿದ್ಯಾರ್ಥಿಗಳು
ಮಂಗಳೂರು: ಅಯ್ಯಪ್ಪ ಮಾಲಾಧಾರಿ ಬಾಲಕನಿಗೆ ಹಲ್ಲೆ ನಡೆಸಿದ ಘಟನೆ ಕಪಿತಾನಿಯೋ ಶಾಲೆ ಬಳಿ ನಡೆದಿದೆ.
ಬಾಲಕ ಮಾಲೆಧಾರಿ ಎಂಬ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ಆತನಿಗೆ ಹೊಡೆದು ಕೊರಳಿನಲ್ಲಿದ್ದ ಮಾಲೆಯನ್ನು ಕಿತ್ತು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ...
ಕುಕ್ಕರ್ ಸ್ಪೋಟ ಪ್ರಕರಣ ಉಗ್ರ ಶಾರೀಕ್ ಎನ್‌ಐಎ ವಶಕ್ಕೆ; ಆಸ್ಪತ್ರೆಯಿಂದಲೇ ಬೆಂಗಳೂರಿಗೆ ಕರೆದುಕೊಂಡು ಹೋದ...
ಮಂಗಳೂರು: ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಗಾಯಗೊಂಡಿದ್ದ ಶಂಕಿತ ಉಗ್ರ ಮೊಹಮ್ಮದ್ ತಾರೀಕ್ ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ವಶಕ್ಕೆ ಪಡೆದು ಕಂಕನಾಡಿ ಆಸ್ಪತ್ರೆಯಿಂದಲೇ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಘಟನೆಯಲ್ಲಿ 40 ಶೇಕಡಾದಷ್ಟು...
ಮಂಗಳೂರು: ಯುವತಿ ನಾಪತ್ತೆ;ದೂರು ದಾಖಲು
ಮಂಗಳೂರು: ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಡೋಟಿ ಕ್ರಿಸ್ಟಬೆಲ್ ಅವರ ಮೊಮ್ಮಗಳು ಶ್ಯಾರಿಲ್ ಟ್ರಿನಿಟಾ ಮಾರ್ಕ್ (19) ನ. 29ರಿಂದ ನಾಪತ್ತೆಯಾಗಿದ್ದಾರೆ.
ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿದ್ದು, ನೆರೆಹೊರೆಯವರನ್ನು ಹಾಗೂ ಸಂಬಂಧಿಕರನ್ನು, ಸ್ನೇಹಿತರನ್ನೂ...
ಮಂಗಳೂರು: ನದಿಗೆ ಹಾರಿ ಯುವಕ ಆತ್ಮಹತ್ಯೆ
ಮಂಗಳೂರು : ಯುವಕನೊಬ್ಬ ಮರವೂರು ಸೇತುವೆಯಿಂದ ಫಲ್ಲುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಯುವಕನನ್ನು ಆಕಾಶಭವನ ನಿವಾಸಿ ಹಿತೇಶ್ (21) ಎಂದು ಗುರುತಿಸಲಾಗಿದೆ.
ಹಿತೇಶ್ ಮೆಡಿಕಲ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದ....
ಸುರತ್ಕಲ್: ಖಾಸಗಿ ಮಾಹಿತಿ ಬಹಿರಂಗ ಪಡಿಸುವುದಾಗಿ ಉದ್ಯಮಿಗೆ ಜೀವ ಬೆದರಿಕೆ – ರಾಜೇಶ್ ಪವಿತ್ರನ್...
ಸುರತ್ಕಲ್: ಉದ್ಯಮಿಯೊಬ್ಬರ ಖಾಸಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇಲೆ ರಾಜೇಶ್ ಪವಿತ್ರನ್ ಎಂಬಾತನನ್ನು ಸುರತ್ಕಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅಖಿಲ ಭಾರತ ಹಿಂದೂ...
ಮಂಗಳೂರು: ಶೌಚಾಲಯಕ್ಕೆ ಗುಂಡಿ ಅಗೆಯುತ್ತಿರುವಾಗ ಮಣ್ಣು ಕುಸಿತ; ಓರ್ವ ಕಾರ್ಮಿಕ ಸಾವು, ಮತ್ತಿಬ್ಬರು ಗಂಭೀರ
ಮಂಗಳೂರು: ಹೊಸ ಮನೆಯ ನಿರ್ಮಾಣದ ಶೌಚಾಲಯಕ್ಕೆ ಗುಂಡಿ ಅಗೆಯುತ್ತಿರುವಾಗ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಅಳಿಕೆ ಎಂಬಲ್ಲಿ...
ಪಂಪ್‌ವೆಲ್ ಲಾಡ್ಜ್‌ನಲ್ಲಿ ನಗ್ನ ಮೃತದೇಹ ಪತ್ತೆ; ಕೊಠಡಿಗೆ ಬಂದಿದ್ದ ಬುರ್ಖಾಧಾರಿ ಮಹಿಳೆ ಬಗ್ಗೆ ಶಂಕೆ
ಮಂಗಳೂರು: ನಗರದ ಪಂಪ್‌ವೆಲ್ ವೃತ್ತದ ಬಳಿಯ ಲಾಡ್ಜ್ ಒಂದರಲ್ಲಿ ಮಧ್ಯವಯಸ್ಕ ವ್ಯಕ್ತಿಯ ಮೃತದೇಹ ಸಂಶಯಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗ್ನವಾಗಿ ಮೃತಪಟ್ಟ ಸ್ಥಿತಿಯಲ್ಲಿ ಶವ ಕಂಡುಬಂದಿದ್ದರಿಂದ ಸಂಶಯ ವ್ಯಕ್ತವಾಗಿದೆ.
ಪಂಪ್‌ವೆಲ್‌ನಲ್ಲಿರುವ ಪದ್ಯಶ್ರೀ ಲಾಡ್ಜ್ ನಲ್ಲಿ ಶವ...
ಉಳ್ಳಾಲ: ಬೈಕ್ ಅಪಘಾತ; ವೈದ್ಯಕೀಯ ವಿದ್ಯಾರ್ಥಿ ದುರ್ಮರಣ, ಸಹಸವಾರ ಗಂಭೀರ
ಉಳ್ಳಾಲ: ತಡರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದ್ದ ಘಟನೆ ಮಂಗಳೂರು ಹೊರವಲಯದ ಕುತ್ತಾರು ಸಮೀಪದ ಮದಕ ಕ್ವಾಟ್ರಗುತ್ತು ಬಳಿ ನಡೆದಿದೆ. ಸಹಸವಾರ ಗಾಯಗೊಂಡಿದ್ದಾರೆ.
ಬೆಂಗಳೂರು ಯಶವಂತಪುರ ನಿವಾಸಿ ಶಿಕ್ಷಕ ಸಿದ್ದರಾಜು ಎಂಬವರ...
















