Friday, June 19, 2026
spot_imgspot_img
spot_imgspot_img

ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ತರುಣ್‌- ಸೋನಲ್‌

- Advertisement -
- Advertisement -

ಮಂಗಳೂರು: ಬೆಂಗಳೂರಿನಲ್ಲಿ ಮದುವೆ ನಡೆದ ನಂತರ ಈ ಜೋಡಿ ಮತ್ತೆ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನವ ಜೋಡಿಯ ವಿವಾಹ ಸಂಭ್ರಮದ ಫೋಟೋಸ್ ವೈರಲ್ ಆಗಿದೆ.

ಸಿಂಡ್ರೆಲಾ ಶೈಲಿಯ ಡಿಸೈನರ್ ವೈಟ್ ಗೌನ್‌ನಲ್ಲಿ ಸೋನಲ್ ಮಿಂಚಿದ್ದಾರೆ, ವೈಟ್ ಆಂಡ್ ಬ್ಲಾಕ್ ಸೂಟ್‌ನಲ್ಲಿ ತರುಣ್ ಸುಧೀರ್ ಕಾಣಿಸಿಕೊಂಡಿದ್ದಾರೆ. ಚರ್ಚ್‌ನಲ್ಲಿ ಸಾಂಪ್ರದಾಯಿಕ ವಿವಾಹ ಕ್ರಮ ಜರುಗಿದೆ. ಸೋನಲ್ ಸುಧೀರ್‍ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಚರ್ಚ್‌ಗೆ ಭೇಟಿ ನೀಡಿ ಅಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಅದಾದ ಮೇಲೆ ಸಣ್ಣ ರಿಸೆಪ್ಶನ್ ಹಮ್ಮಿಕೊಂಡಿದ್ದರು.ಮಂಗಳೂರಿನಲ್ಲಿ ಇರುವ ಕುಟುಂಬಸ್ಥರು ಮತ್ತು ಸ್ನೇಹಿತರಿಗಾಗಿ ಆರತಕ್ಷತೆ ಹಮ್ಮಿಕೊಂಡಿದ್ದರು. ಅಲ್ಲಿ ಕೂಡ ಸಾವಿರಾರೂ ಸಂಖ್ಯೆಯಲ್ಲಿ ಜನ ಸೇರಿದ್ದರು.

ಉಂಗುರ ಬದಲಾಯಿಸಿಕೊಂಡ ನಂತರ ಚರ್ಚ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹೊರಗೆ ಬಂದು ಸ್ಟೇಜ್ ಮೇಲೆ ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ. ಸದ್ಯ ನವಜೋಡಿಯ ಮದುವೆ ಸಮಾರಂಭದ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

- Advertisement -

Related news

error: Content is protected !!