- Advertisement -
- Advertisement -
ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ವತಿಯಿಂದ ಶಿಕ್ಷಕರ ದಿನಾಚರಣೆ ಮಾಡಲಾಯಿತು. ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರಾದ ಶ್ರೀ ವಸಂತ್ ಶೆಟ್ಟಿ ಎರ್ಮೆನಿಲೆಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ವಿನ್ನಿ ಮಸ್ಕರೇನ್ಹಸ್, ಸೀತಮ್ಮ ಕೊಂಗಲಾಯಿ, ಮತ್ತು ನಿವೃತ್ತ ಶಿಕ್ಷಕರಾದ ರಾಮಣ್ಣಗೌಡ ಕೊಂಗಲಾಯಿ ಇವರ ಸ್ವಗೃಹಕ್ಕೆ ತೆರಳಿ ಸನ್ಮಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪ್ರಾಂತ್ಯ ಅಧ್ಯಕ್ಷರು ಸುದರ್ಶನ ಪಡಿಯಾರ್, ಕ್ಲಬ್ ನ ಉಪಾಧ್ಯಕ್ಷರುಗಳಾದ ಓ ಎ ಕೃಷ್ಣ, ಮೋಹನ್ ಕಟ್ಟೆ, ಕೋಶಾಧಿಕಾರಿ ದಿನಕರ ಆಳ್ವ, ಸಕ್ರಿಯ ಸದಸ್ಯರುಗಳಾದ ಧರ್ಣಪ್ಪ ಗೌಡ ಬನ, ಚಂದ್ರಹಾಸ ಗೌಡ ಬನ, ಡಾ. ರೂಪಲತಾ, ಕೃಷ್ಣಪ್ಪ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
- Advertisement -