- Advertisement -
- Advertisement -
ತೆಲಂಗಾಣ: ಬಟ್ಟೆ ಒಣಗಿಸುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ನಾಲ್ವರು ಮೃತಪಟ್ಟಿರುವ ಘಟನೆ ಮಹಬೂಬಾಬಾದ್ ಜಿಲ್ಲೆಯ ಅಮಂಗಲ್ಲು ಎಂಬಲ್ಲಿ ನಡೆದಿದೆ.ಎರಡು ಕುಟುಂಬಗಳ ದಂಪತಿಗಳಾದ ಸತ್ತಯ್ಯ-ರಾಧಾ ಮತ್ತು ಲಿಂಗಯ್ಯ-ಲಚ್ಚಮ್ಮ ಮೃತಪಟ್ಟವರು.
ಸತ್ತಯ್ಯ- ರಾಧಮ್ಮ ದಂಪತಿ ಮನೆಯಲ್ಲಿ ಬಟ್ಟೆ ಒಣಗಿಸುವಾಗ ವಿದ್ಯುತ್ ತಗುಲಿ ಆಘಾತದಿಂದ ಕೆಳಗೆ ಬಿದ್ದರು. ಅವರನ್ನು ರಕ್ಷಿಸಲು ಲಿಂಗಯ್ಯ-ಲಚ್ಚಮ್ಮ ದಂಪತಿ ಮುಂದಾಗಿದ್ದು ಅವರೂ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ದೇಹಗಳನ್ನು ಮಹಾಬೂಬಾದ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
- Advertisement -