Friday, March 29, 2024
spot_imgspot_img
spot_imgspot_img

ಮಂಗಳೂರು: ಲಾಕ್‌ಡೌನ್‌ನಿಂದ ಮುಚ್ಚಿದ ಆರಾಧನ ಆಲಯ; ಕರಾವಳಿಯ ಪ್ರಮುಖ ದೇವಸ್ಥಾನದಲ್ಲಿ ಉಂಟಾದ ನಷ್ಟವೆಷ್ಟು ಗೊತ್ತಾ.?

- Advertisement -G L Acharya panikkar
- Advertisement -

ಮಂಗಳೂರು; ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಬಹುತೇಕ ಎಲ್ಲಾ ಆರಾಧನಾ ಆಲಯಗಳು ಬಾಗಿಲು ಹಾಕಿದೆ. ಈ ಪರಿಣಾಮದಿಂದ ರಾಜ್ಯದ ದೇವಾಲಯಗಳ ಹುಂಡಿಗಳೆಲ್ಲಾ ಖಾಲಿ-ಖಾಲಿಯಾಗಿದ್ದು, ಸುಮಾರು 105 ಕೋಟಿಗಿಂತ ಹೆಚ್ಚು ನಷ್ಟ ಮುಜರಾಯಿ ಇಲಾಖೆಗೆ ಆಗಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಸುಮಾರು 34 ಸಾವಿರ ದೇವಾಲಯಗಳಿದ್ದು, 144 ದೇವಸ್ಥಾನಗಳು ‘ಎ’ ವರ್ಗಕ್ಕೆ ಸೇರಿದೆ. ಈ ದೇವಾಲಯಗಳಲ್ಲಿ ವಾರ್ಷಿಕ ತಲಾ 25 ಲಕ್ಷ ರೂಪಾಯಿ ಆದಾಯ ಮುಜರಾಯಿ ಇಲಾಖೆಗೆ ಬರುತಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಭಕ್ತರಿಗೆ ಪ್ರವೇಶ ನಿಷೇಧವಾಗಿದ್ದು, ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಿವೆ.

ರಾಜ್ಯದ ನಂಬರ್ 1 ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಾಕ್‌ಡೌನ್ ಕಾರಣದಿಂದ 22 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ ಸೇವೆಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬರುತಿತ್ತು. ಕಟೀಲು ದುರ್ಗಾಪರಮೇಶ್ವರಿ 7 ಕೋಟಿ, ಪುತ್ತೂರು ಮಹಾಲಿಂಗೇಶ್ವರ 1.5 ಕೋಟಿ ರೂಪಾಯಿ, ಕದ್ರಿ ಮಂಜುನಾಥೇಶ್ವರ 2 ಕೋಟಿ, ಪೊಳಲಿ ರಾಜರಾಜೇಶ್ವರಿ 2 ಕೋಟಿ ರೂಪಾಯಿ ನಷ್ಟವುಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, “ದೇವಾಲಯಗಳಲ್ಲಿ ನಷ್ಟವುಂಟಾಗಿರುವ ಬಗ್ಗೆ ನಿಖರವಾದ ಅಂದಾಜು ಪಟ್ಟಿ ಮಾಡಿಲ್ಲ. ಆದರೆ ಈ ಬಾರಿ ಎಲ್ಲಾ ದೇವಾಲಯದಲ್ಲಿ ಶೇ 50ರಷ್ಟು ನಷ್ಟ ಉಂಟಾಗಿದೆ” ಎಂದು ಹೇಳಿದ್ದಾರೆ.

- Advertisement -

Related news

error: Content is protected !!