Thursday, June 18, 2026
spot_imgspot_img
spot_imgspot_img

ಕೆಎಸ್ಆರ್ ಟಿಸಿ ಬಸ್ ಹಾಗೂ ಓಮ್ನಿ ಕಾರಿನ ನಡುವೆ ಭೀಕರ ಅಪಘಾತ : ಸ್ಥಳದಲ್ಲೇ ಮೂವರು ಸಾವು

- Advertisement -
- Advertisement -

ಓಮ್ನಿ ಕಾರು ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನಪ್ಪಿದ ಘಟನೆ ಶಿವಮೊಗ್ಗ-ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ-ಬಿದರಹಳ್ಳಿ ನಡುವೆ ಸಂಭವಿಸಿದೆ.

ಮೃತರನ್ನು ಶಿಕಾರಿಪುರ ತಾಲ್ಲೂಕಿನ ಹರಮಘಟ್ಟದ ನಂಜುಂಡಪ್ಪ, ರಾಕೇಶ್ ಹಾಗೂ ದೇವರಾಜ್ ಎಂದು ತಿಳಿದುಬಂದಿದೆ. ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸಲಾಗಿದೆ.

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೊರಟಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ ಹಾಗೂ ಓಮ್ನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗಜ್ಜಾಗಿದೆ. ಬಸ್‌ ಕಾರಿಗೆ ಡಿಕ್ಕಿ ಹೊಡೆದು ನಂತರ ರಸ್ತೆಪಕ್ಕದ ತಡೆಗೋಡೆಗೆ ಗುದ್ದಿದೆ. ಇದರಿಂದ ಬಸ್‌ನ ಮುಂದಿನ ಚಕ್ರ ಕಳಚಿದ್ದು, ಮುಂಭಾಗ ಜಖಂಗೊಂಡಿದೆ.

- Advertisement -

Related news

error: Content is protected !!