- Advertisement -
- Advertisement -
ಸತ್ತೇ ಹೋಗಿದ್ದಾನೆ ಎಂದು ನಂಬಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆ ಪ್ರಕರಣದ ಆರೋಪಿ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಎರಡು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ. ಮನೆ ಬಳಿ ಪೊಲೀಸರು ವಿಚಾರಿಸಿದಾಗ ಸತ್ತೇ ಹೋಗಿದ್ದಾನೆ ಎಂದ ಕುಟುಂಬ ಹಾಗೂ ಮಲ್ಲಿಯ ಗೆಳೆಯರು, ಸೇರಿ ಯಾವ ಪರಿಚಿತರನ್ನ ಕೇಳಿದರೂ ಸತ್ತಿದ್ದಾನೆ ಎಂದು ಮಾಹಿತಿ ಸಿಕ್ಕಿತ್ತು. ಸತ್ತು ಹೋಗಿದ್ದಾನೆ ಎನ್ನುವುದಕ್ಕೆ ಬೇಕಾದ ದಾಖಲೆಯನ್ನು ಸಹ ಕುಟುಂಬ ಮಾಡಿಟ್ಟುಕೊಂಡಿದ್ದರು. ಈ ಬಗ್ಗೆ ಸಿಬಿ ಪೊಲೀಸರಿಗೆ ಅನುಮಾನ ಬಂದು ತಲಾಶ್ ಮಾಡಿದಾಗ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಈಗ ಸಿಕ್ಕಿಬಿದ್ದಿದ್ದಾನೆ.
- Advertisement -