Thursday, May 16, 2024
spot_imgspot_img
spot_imgspot_img

ಸುಳ್ಯ : ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಬ್ಯಾಟರಿ ಕಳವು

- Advertisement -G L Acharya panikkar
- Advertisement -

ಸುಳ್ಯ : ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಬ್ಯಾಟರಿ ಕಳವುಗೈದ ಘಟನೆ ಸುಳ್ಯ ತಾಲೂಕು, ಕಲ್ಮಡ್ಕ ಗ್ರಾಮದ ಕಜೆ ಎಂಬಲ್ಲಿ ನಡೆದಿದೆ.

ಕಲ್ಮಡ್ಕ ಗ್ರಾಮದ ನಿವಾಸಿ ಇರ್ಶಾದ್ ಹಾಗೂ ಪುತ್ತೂರು ನಿವಾಸಿ ಕಿಶೋರ್ ಅವರ ಜೊತೆ ಪಾಲುದಾರಿಕೆಯಲ್ಲಿ ಖರೀದಿಸಿದ ಟಿಪ್ಪರ್ ಲಾರಿಯನ್ನು ರಾತ್ರಿ ಕೆಲಸ ಮುಗಿಸಿ ಕಜೆ ಎಂಬಲ್ಲಿ ನಿಲ್ಲಿಸಿ ತೆರಳಿದ್ದಾರೆ. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಟಿಪ್ಪರ್ ಲಾರಿಯಲ್ಲಿದ್ದ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಅಮೋನ್ ಕಂಪೆನಿಯ 1 ಬ್ಯಾಟರಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2024 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!