Monday, May 20, 2024
spot_imgspot_img
spot_imgspot_img

ವಿಟ್ಲ : ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಉರುಳಿ ಬಿದ್ದು ಸಹ ಸವಾರನಿಗೆ ಗಾಯ

- Advertisement -G L Acharya panikkar
- Advertisement -

ವಿಟ್ಲ : ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಎಕ್ಸ್ ಚೇಂಚ್ ಎದುರುಗಡೆ ನಡೆದಿದೆ.

ಗಾಯಾಳು ಸಹಸವಾರರನ್ನು ವಿಟ್ಲ ಕಸಬಾ ಗ್ರಾಮದ ನಿವಾಸಿ ಕೊರಗಪ್ಪ (53) ಎಂದು ಹೆಸರಿಸಲಾಗಿದೆ. ಇವರು ಸದಾಶಿವ ಅವರು ಚಲಾಯಿಸುತ್ತಿದ್ದ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ವಿಟ್ಲ ಎಕ್ಸ್ ಚೇಂಚ್ ಬಳಿ ಚಾಲಕನ ನಿಯಂತ್ರಣ ಮೀರಿ ಬೈಕ್ ರಸ್ತೆಗೆ ಉರುಳಿ ಬಿದ್ದಿದೆ. ಈ ವೇಳೆ ಬೈಕ್ ಸಮೇತ ಇಬ್ಬರೂ ರಸ್ತೆಗೆ ಬಿದ್ದಿದ್ದು, ಸಹಸವಾರ ಕೊರಗಪ್ಪ ಅವರಿಗೆ ಗಾಯವಾಗಿದೆ. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 212/2023 ಕಲಂ: 279,337 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!