Sunday, June 21, 2026
spot_imgspot_img
spot_imgspot_img

ಕಾಸರಗೋಡು: ಅಪರಿಚಿತ ಯುವಕನ ಮೃತ ದೇಹ ಪತ್ತೆ! ವಾರಿಸುದಾರರು ಇದ್ದಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ವಿನಂತಿ

- Advertisement -
- Advertisement -

ಕಾಸರಗೋಡು : ಮಂಜೇಶ್ವರ ಹೊಸಂಗಡಿ ಬಳಿಯ ಕೊಪ್ಪಳ ಕಜೆಯಲ್ಲಿರುವ ನದಿಯಲ್ಲಿ ಅಪರಿಚಿತ ಯುವಕ ನೋರ್ವನ ಮೃತ ದೇಹ ಪತ್ತೆಯಾಗಿದೆ.

ಸುಮಾರು 35 ವರ್ಷ ಪ್ರಾಯ ಅಂದಾಜಿಸಲಾಗಿದೆ. ಪರಿಸರ ವಾಸಿಗಳು ಗಮನಿಸಿ ಮಂಜೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮುಖದ ಚಹರೆ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

ಈ ನದಿಯು ಪುತ್ತೂರು , ವಿಟ್ಲ ಭಾಗದಿಂದ ಹರಿದು ಆನೆಕಲ್ಲು,ಮುನ್ನಿಪ್ಪಾಡಿ, ಕೊಡಂಗೆ ವಾಮಂಜೂರು ಚೆಕ್ ಪೋಸ್ಟ್ ,ಕೊಪ್ಪಳ ಕಜೆ ಮೂಲಕ ಹೊಸಬೆಟ್ಟು ಸಮುದ್ರಕ್ಕೆ ಸೇರುತ್ತದೆ. ವಾರಿಸುದಾರರು ಇದ್ದಲ್ಲಿ. ಮಂಜೇಶ್ವರ ಪೊಲೀಸ್ ಠಾಣೆ 8113800968, 9497980926 ನಂಬರ್‌ ವನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ

- Advertisement -

Related news

error: Content is protected !!