- Advertisement -
- Advertisement -



ಪೂಂಜಾಲಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದು ಚಾಲಕ ಸಹಿತ ಆರು ಮಂದಿ ಗಾಯಗೊಂಡ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಡಂತ್ಯಾರು ಸಮೀಪದ ಮಾಲಾಡಿ ಎಂಬಲ್ಲಿ ಸಂಭವಿಸಿದೆ.
ಗಾಯಗೊಂಡವರನ್ನು ಕಾರು ಚಾಲಕ ಅಬ್ದುಲ್ ಹಮೀದ್, ಅವರ ಪತ್ನಿ ಶಬಾನ, ಹಮೀದ್ ಅವರ ತಾಯಿ ಜೈನಾಬಿ, ಆಮೀನಾ, ಅಬ್ದುಲ್ ಹಮೀದ್ ಅವರ ಮಗಳು ಫಾತಿಮಾ ಝಿದಾ ಎಂದು ತಿಳಿದು ಬಂದಿದೆ.
ಕಾರು ಚಾಲಕ ಅಬ್ದುಲ್ ಹಮೀದ್ ಅವರು ಕುಟುಂಬ ಸಮೇತವಾಗಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮಾಲಾಡಿ ಗ್ರಾಮ ಮಡಂತ್ಯಾರು ಬಳಿ ರಸ್ತೆ ಬದಿಯ 15 ಅಡಿ ಆಳ ಕಮರಿಗೆ ಉರುಳಿ ಬಿದ್ದು ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಾರಿನ ಹಿಂದೆ ಬರುತ್ತಿದ್ದ ಅವರ ಸಂಬಂಧಿ ಝಕರಿಯಾ ಎಂಬವರು ಇತರ ಸಾರ್ವಜನಿಕರ ಸಹಕಾರದೊಂದಿಗೆ ತನ್ನ ಕಾರನ್ನು ನಿಲ್ಲಿಸಿ ಅಪಘಾತಗೊಂಡ ಕಾರಿನ ಒಳಗೆ ಸಿಲುಕಿದವರನ್ನು ಹೊರಗೆ ತೆಗೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ .
ಈ ಕುರಿತು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








