Saturday, June 13, 2026
spot_imgspot_img
spot_imgspot_img

ಚಾಕುವಿನಿಂದ ಚುಚ್ಚಿ ಮಗನನ್ನು ಕೊಲೆಗೈದ ತಂದೆ..!

- Advertisement -
- Advertisement -

ತಂದೆ ಮಗನನ್ನು ಚಾಕುವಿನಿಂದ ಚುಚ್ಚಿ ಹತ್ಯೆಯಾದ ಘಟನೆ ಆನೇಕಲ್ ಪಟ್ಟಣ ಸಮೀಪದ ನಾರಾಯಣಪುರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ಸುರೇಶ್ (35) ಹಾಗೂ ತಂದೆ ಯಲ್ಲಪ್ಪಎಂದು ಗುರುತಿಸಲಾಗಿದೆ.

ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಅದೇ ರೀತಿ ನಿನ್ನೆ ಕುಡಿದು ಬಂದು ಗಲಾಟೆ ಮಾಡಿದ್ದ. ತಾಯಿಯನ್ನು ಹಿಡಿದು ಹೊಡೆಯುತ್ತಿದ್ದನಂತೆ.ಇದನ್ನು ನೋಡಿ ತಂದೆ , ಗಲಾಟೆ ಬಿಡಿಸಲು ಬಂದಿದ್ದಾನೆ. ಆಗ ಯಲ್ಲಪ್ಪನ ಮೇಲೂ ಹಲ್ಲೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಮಗನಿಗೆ ಕುತ್ತಿಗೆಗೆ ಚುಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು, ಚಿಕಿತ್ಸೆ ಫಲಸದೇ ಸಾವನ್ನಪ್ಪಿದ್ದಾನೆ. ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಕೇಸ್ ದಾಖಲಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!