Sunday, July 19, 2026
spot_imgspot_img
spot_imgspot_img

ಹೆಜ್ಬೊಲ್ಲಾ ಭದ್ರಕೋಟೆ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ – 11 ಮಂದಿ ಸಾವು

- Advertisement -
- Advertisement -

ಬೈರುತ್: ಅಮೆರಿಕ-ಇರಾನ್‌ ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ ಹೆಜ್ಬೊಲ್ಲಾ ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಲೆಬನಾನ್‌ನ ಟೈರ್ ಬಳಿಯ ಮಾರೂಬ್ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ದಕ್ಷಿಣ ಪಟ್ಟಣವಾದ ಬಿಂಟ್ ಜೆಬೈಲ್‌ನಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಹೆಜ್ಬೊಲ್ಲಾ ನಡುವೆ ತೀವ್ರ ಘರ್ಷಣೆಗಳು ನಡೆದಿವೆ ಎಂದು ವರದಿ ಮಾಡಿದೆ.

ಇಸ್ರೇಲ್‌ ಪಡೆಗಳು, ಹೆಜ್ಬೊಲ್ಲಾ ಕಾರ್ಯಕರ್ತರು ಮತ್ತು ಮೂಲಸೌಕರ್ಯಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಪಟ್ಟಣವನ್ನು ಸುತ್ತುವರೆದಿವೆ. ಇಸ್ರೇಲಿ ಪಡೆಗಳು ಬಿಂಟ್ ಜೆಬೈಲ್‌ನಲ್ಲಿ ಉಳಿದ ನೆರೆಹೊರೆಗಳಿಗೆ ನುಸುಳಲು ಮತ್ತು ನಿಯಂತ್ರಣ ಸಾಧಿಸಲು ಇನ್ನೂ ಪ್ರಯತ್ನಿಸುತ್ತಿವೆ ಎನ್ನಲಾಗಿದೆ. ಮಧ್ಯಪ್ರಾಚ್ಯ ಹಾಗೂ ಗಲ್ಫ್‌ನಲ್ಲಿ ಯುದ್ಧ ನಿಲ್ಲಿಸಲು ಇರಾನ್‌ ಮತ್ತು ಅಮೆರಿಕ ನಡುವೆ ಶನಿವಾರ ಸಂಧಾನ ಸಭೆ ನಡೆಯಿತು. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ ವಿಫಲವಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ

- Advertisement -

Related news

error: Content is protected !!