Saturday, June 6, 2026
spot_imgspot_img
spot_imgspot_img

ಪ್ರೇಯಸಿಯನ್ನು ಕೊಲೆಗೈದು ಮ್ಯಾನ್‌ಹೋಲ್‌ಗೆ ಎಸೆದ ಅರ್ಚಕ..!!

- Advertisement -
- Advertisement -

ಅರ್ಚಕರೊಬ್ಬರು ತಮ್ಮ ಪ್ರೇಯಸಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಮ್ಯಾನ್​ಹೋಲ್​ಗೆ ಎಸೆದಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ನಡೆದಿದೆ.

ಶಂಶಾಭಾದ್​ನಲ್ಲಿರುವ ಬಂಗಾರು ಮೈಸಮ್ಮ ದೇವಸ್ಥಾನದ ಅರ್ಚಕ ವೆಂಕಟಸೂರ್ಯ ಸಾಯಿಕೃಷ್ಣ(36) ಎಂದು ತಿಳಿದು ಬಂದಿದ್ದು, ಮೃತ ದುರ್ದೈವಿಯನ್ನು ಕುರುಗಂಟಿ ಅಪ್ಸರಾ(30) ಎಂದು ವರದಿಯಾಗಿದೆ.

ವೃತ್ತಿಯಲ್ಲಿ ಅರ್ಚಕ, ಬಿಲ್ಡರ್​ ಆಗಿ ಕೆಲಸ ಮಾಡುತ್ತಿರುವ ಸಾಯಿಕೃಷ್ಣಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಅಪ್ಸರಾ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈ ನಡುವೆ ಆತನ ಪ್ರೇಯಸಿಯೂ ಮೊದಲ ಪತ್ನಿಗೆ ವಿಚ್ಛೇದನ ನೀಡಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು.

ದಿನದಿಂದ ದಿನಕ್ಕೆ ಅಪ್ಸರಾ ಮದುವೆಯಾಗುವಂತೆ ಸಾಯಿಕೃಷ್ಣ ಮೇಲೆ ಒತ್ತಡ ಹೇರುತ್ತಿದ್ದ ಕಾರಣ ಆರೋಪಿಯೂ ಆಕೆಯ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಮೊದಲಿಗೆ ಅಪ್ಸರಾಳನ್ನು ಮಾತನಾಡುವ ನೆಪದಲ್ಲಿ ಭೇಟಿ ಮಾಡಿದ ಆರೋಪಿಯೂ ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ಮ್ಯಾನ್​ಹೋಲ್​ ಒಳಗೆ ಎಸೆದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಬಂದು ಅಪ್ಸರಾ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ಬಳಿಕ ಎರಡು ಟಿಪ್ಪರ್ ಲೋಡ್ ಕೆಂಪು ಮಣ್ಣು ತಂದು ಮ್ಯಾನ್ ಹೋಲ್ ಮುಚ್ಚಿದ್ದರು. ಆಕೆಯ ಬ್ಯಾಗ್ ಹಾಗೂ ಚಪ್ಪಲಿ ಮೊದಲಾದವುಗಳನ್ನೆಲ್ಲ ಸುಟ್ಟು ಹಾಕಿದ್ದಾನೆ. ಇತ್ತ ಕಾರನ್ನು ವಾಶ್ ಮಾಡಿ ತನ್ನ ಅಪಾರ್ಟ್‍ಮೆಂಟ್ ಮುಂದೆ ನಿಲ್ಲಿಸಿದ್ದಾನೆ. ಮರುದಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಮ್ಯಾನ್‍ಹೋಲ್ ಪರಿಶೀಲನೆ ನಡೆಸಲು ಮುಂದಾದಾಗ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಆಕೆಯ ನಂಬರ್​ ಟ್ರೇಸ್​ ಮಾಡಿದ್ದಾರೆ. ಬಳಿಕ ನಂಬರ್​ ಕಡೆಯದಾಗಿ ಪತ್ತೆಯಾದ ಸ್ಥಳಕ್ಕೆ ಹೋಗಿ ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಆರೋಪಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಾಯಿಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!