ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಏಕಾದಶ ಕಲಶ ತೀರ್ಥ ರಥ ಹಾಗೂ ಹಸಿರುವಾಣಿ ಮೆರವಣಿಗೆ





ಪುತ್ತೂರು: ಬಂಟ್ವಾಳ ತಾಲೂಕಿನ ಕರೋಪಾಡಿ – ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ಮಾರ್ಚ್ 30ರಿಂದ ಎಪ್ರಿಲ್ 6ರ ವರೆಗೆ ನಡೆಯಲಿದ್ದು, ಬ್ರಹ್ಮಕಲಶಾಭಿಷೇಕವು ನೇಪಾಳದ ಗಂಡಕಿ, ಗಂಗಾ, ಯಮುನಾ, ಸರಸ್ವತಿ ಇತ್ಯಾದಿ ಅಖಂಡ ಭಾರತದ ಏಕಾದಶ ಪುಣ್ಯ ನದಿಗಳ ತೀರ್ಥದೊಂದಿಗೆ ನಡೆಯಲಿದೆ.
ಏಕಾದಶ ಕಲಶ ತೀರ್ಥ ರಥ ಹಾಗೂ ಹಸಿರುವಾಣಿ ಮೆರವಣಿಗೆ ಮಾರ್ಚ್ 30 ರ ಸೋಮವಾರ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಉಪ್ಪಿನಂಗಡಿಯಿಂದ ಆರಂಭವಾಗಿ ನೆಕ್ಕಿಲಾಡಿ – ಬೆಳ್ಳಿಪ್ಪಾಡಿ – ಕೆಮ್ಮಾಯಿ – ಎ.ಪಿ.ಎಂ.ಸಿ. ಕ್ರಾಸ್ – ಆದರ್ಶ ಆಸ್ಪತ್ರೆ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆ ತಲುಪಿ, ಮಧ್ಯಾಹ್ನ 12.00ಕ್ಕೆ ಪೂರ್ಣಕುಂಭ ಸ್ವಾಗತ – ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಸಾಮೂಹಿಕ ಪ್ರಾರ್ಥನೆ – ವಿಶೇಷ ಪೂಜೆ ಬಳಿಕ 1.30ಕ್ಕೆ ಸಾಧು – ಸ೦ತರ, ಗಣ್ಯರ ಉಪಸ್ಥಿತಿಯಲ್ಲಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.








