Friday, June 19, 2026
spot_imgspot_img
spot_imgspot_img

ಗಣೇಶೋತ್ಸವ ವೇಳೆ ಡಿಜೆ ನಿಷೇಧ ಇಲ್ಲ, ನಿಯಮ ಪ್ರಕಾರ ಬಳಕೆ: ಸಚಿವ ಶಿವರಾಜ್ ತಂಗಡಗಿ

- Advertisement -
- Advertisement -

ಕೊಪ್ಪಳ: ಗಣೇಶ ಹಬ್ಬದಲ್ಲಿ ಡಿಜೆ ಬಳಕೆ ಕುರಿತು ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಸಲಾಗುತ್ತದೆ. ಈ ವಿಷಯದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ಆದರೆ, ಡಿಜೆ ನಿಷೇಧ ಮಾಡಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿಜೆ ನಿಷೇಧ ಎಂಬ ಬಿಜೆಪಿ ಮಾತು ಕೇಳಬೇಡಿ. ಡಿಜೆ ಬಳಕೆಗೆ ಕೋರ್ಟ್‌ ಮಾರ್ಗಸೂಚಿಯ ಪ್ರಕಾರ ಇಂತಿಷ್ಟು ಡೆಸಿಬಲ್‌ ಇರಬೇಕು ಎಂಬ ನಿಯಮವಿದೆ. ಆ ಪ್ರಕಾರ ನೋಡಿಕೊಳ್ಳಬೇಕು. 18ನೇ ವಯಸ್ಸಿಗೆ ಮತದಾನದ ಹಕ್ಕುನೀಡಿದ್ದು ನಮ್ಮ ಕಾಂಗ್ರೆಸ್ ಹೀಗಿದ್ದ ಮೇಲೆ ನಾವು ಯುವಕರಿಗೆ ಅದು ಹೇಗೆ ಡಿಜೆ ಬಳಕೆಗೆ ನಿಷೇಧ ಹೇರಲು ಸಾಧ್ಯವೆಂದು ತಂಗಡಗಿ ಹೇಳಿದರು.

- Advertisement -

Related news

error: Content is protected !!