Thursday, July 30, 2026
spot_imgspot_img
spot_imgspot_img

ಖೋಟ ನೋಟು ತಯಾರಿಸುತ್ತಿದ್ದ ಆರೋಪಿ ಅಂದರ್!!

- Advertisement -
- Advertisement -

ಬೆಂಗಳೂರು: ನಗರದಲ್ಲಿ ಖೋಟಾ ನೋಟು ತಯಾರು ಮಾಡುತ್ತಿದ್ದ ಆರೋಪಿಯನ್ನು ವಿಲ್ಸನ್ ಗಾರ್ಡನ್​ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರ ನಿವಾಸಿ ಗುಂಡು ಅಲಿಯಾಸ್​ ಇಮ್ರಾನ್ ಬಂಧಿತ ಆರೋಪಿ.

ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಆರೋಪಿಯ ಬಂಧನವಾಗಿದೆ. ನಿನ್ನೆ ಆಟೋದಲ್ಲಿ ಪ್ರಯಾಣ ಮಾಡಿದ್ದ ಜಮಾಲ್ ಎಂಬಾತ ₹100ರ ಮುಖ ಬೆಲೆಯ ಖೋಟಾ ನೋಟು ನೀಡಿದ್ದ. ಅನುಮಾನಗೊಂಡ ಆಟೋ ಚಾಲಕ ನೋಟು ಸಹಿತ ಆರೋಪಿಯನ್ನು ಠಾಣೆಗೆ ಕರೆ ತಂದಿದ್ದ. ನೋಟು ಪರಿಶೀಲನೆ ವೇಳೆ ಖೋಟಾ ನೋಟು ಎಂಬುದು ಪತ್ತೆ‌ಯಾಗಿದೆ. ಇನ್ನು ಆರೋಪಿ ಜಮಾಲ್​ ಹೇಳಿಕೆ ಮೇಲೆ ಇಂದು ಇಮ್ರಾನ್​ನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯಿಂದ ನಕಲಿ ನೋಟು ತಯಾರು ಮಾಡುವ ಯಂತ್ರ 2,000 ಹಾಗೂ 200 ಸೇರಿದಂತೆ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬೆಂಗಳೂರಿನ 4 ಕಡೆ ನೋಟು ತಯಾರು ಮಾಡುತ್ತಿದ್ದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದ್ದು, ವಿಲ್ಸನ್ ಗಾರ್ಡನ್ ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.

- Advertisement -

Related news

error: Content is protected !!