- Advertisement -
- Advertisement -
ಹೈದರಾಬಾದ್ : ಮಹಿಳೆಯೊಬ್ಬಳು ತನ್ನ ಪತಿ ಫೋನ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆಂದು ಆರೋಪಿಸಿ ನ್ಯಾಯ ಕೊಡಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾಳೆ.
ಯುಎಸ್ ಪೌರತ್ವ ಹೊಂದಿರುವ ಮಹಿಳೆ ಹೈದರಾಬಾದ್ ನಲ್ಲಿ ತಂದೆಯೊಂದಿಗೆ ವಾಸಿಸುತ್ತಿದ್ದು, ಸೊಮಾಲಿಯಾ ಪ್ರಜೆಯಾದ ಪತಿ ಮೊಬೈಲ್ ನಲ್ಲಿ ತ್ರಿವಳಿ ತಲಾಖ್ ನೀಡಿದ್ದಾರೆಂದು
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾಳೆ.
ಮಹಿಳೆ ಹೇಳಿಕೆಯಲ್ಲಿ ಆರು ತಿಂಗಳಿಗೊಮ್ಮೆ ತನ್ನನ್ನು ನೋಡಲು ಹೈದರ್ ಬಾದ್ ಗೆ ಬರುತ್ತಿದ್ದರು ಆದರೆ ಯುಎಸ್ ಗೆ ಹೋದ ಬಳಿಕ ಅಕ್ಟೋಬರ್ 7 ರಂದು, ನನ್ನ ಪತಿ ನನ್ನ ತಂದೆಯ ದೂರವಾಣಿಗೆ ಕರೆ ಮಾಡಿ ತಲಾಖ್ ಅನ್ನು ಯಾವುದೇ ಕಾರಣವಿಲ್ಲದೆ ಮೂರು ಬಾರಿ ಉಚ್ಚರಿಸಿದ್ದಾರೆ. ಅಂದಿನಿಂದ ನನ್ನೊಂದಿಗೆ ಸಂಪರ್ಕದಲ್ಲಿಲ್ಲ. ಆದ್ದರಿಂದ ಯುಎಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತನ್ನ ಪತಿಯೊಂದಿಗೆ ಮಾತನಾಡಲು ಅನುವು ಮಾಡಿ, ಸಾಧ್ಯವಾದಷ್ಟು ಬೇಗ ಇತ್ಯರ್ಥಪಡಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
- Advertisement -