Wednesday, July 1, 2026
spot_imgspot_img
spot_imgspot_img

ನಿರ್ಮಲಾ ಸೀತಾರಾಮನ್‌ ಗೆ ಉಡುಪಿ ಕೃಷ್ಣಮಠದಿಂದ ಭಾರತ ಲಕ್ಷ್ಮಿಬಿರುದು

- Advertisement -
- Advertisement -

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದಸಂದರ್ಭದಲ್ಲಿ ಶನಿವಾರ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಭಾರತ ಲಕ್ಷ್ಮಿ ಎಂಬ ಗೌರವ ಬಿರುದನ್ನು ಪ್ರದಾನ ಮಾಡಲಾಯಿತು. ಪುತ್ತಿಗೆ ಮಠದ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಈ ಗೌರವವನ್ನು ನಿರ್ಮಲಾ ಸೀತಾರಾಮನ್‌ಗೆ ಪ್ರದಾನ ಮಾಡಿದರು. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠಕ್ಕೆ ರೂಪಿಸಿದ ಮಠದ ಕಾಷ್ಠ ಯಾಳಿಯನ್ನು ಉದ್ಘಾಟಿಸುವ ಸಲುವಾಗಿ ನಿರ್ಮಲಾ ಸೀತಾರಾಮನ್ ಶನಿವಾರ ಉಡುಪಿಗೆ ಆಗಮಿಸಿದ್ದರು.ಉಡುಪಿಯ ಆಧ್ಯಾತ್ಮಿಕ ಸಂಪ್ರದಾಯಗಳೊಂದಿಗೆ ತಮ್ಮ ಆಳವಾದ ಭಾವನಾತ್ಮಕ ಸಂಪರ್ಕವನ್ನು ವ್ಯಕ್ತಪಡಿಸಿದ ನಿರ್ಮಾಲಾ ಸೀತಾರಾಮನ್ ಭಗವದ್ಗೀತೆಯ ಒಂದು ಕೋಟಿ ಕೈಬರಹದ ಪ್ರತಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಅವರು ಶ್ಲಾಘಿಸಿದರು. ದೇವಾಲಯದ ಅನ್ನದಾಸೋಹ ಸಂಪ್ರದಾಯವನ್ನು ಅವರು ಶ್ಲಾಘಿಸಿ ಆರೋಗ್ಯಕರ ಊಟದ ನಂತರ ಭಕ್ತರ ಮುಖಗಳಲ್ಲಿ ಕಂಡುಬರುವ ಸಂತೋಷ ಮತ್ತು ತೃಪ್ತಿಯು ಭಗವಾನ್ ಕೃಷ್ಣನ ಉಪಸ್ಥಿತಿಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.ಇದಕ್ಕೂ ಮುನ್ನ ನಿರ್ಮಲಾ ಸೀತಾರಾಮನ್ ಸ್ವಾಮೀಜಿಗಳೊಂದಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಮಾಡಿದರು. ಮಠದಲ್ಲಿ ವಿವಿಧ ಸೇವೆಗಳನ್ನು ನೆರವೇರಿಸಿದರು. ಶ್ರೀಕೃಷ್ಣ ದೇವಸ್ಥಾನದ ಬಾಗಿಲು ಲಕ್ಷ್ಮಿಪೂಜೆಯನ್ನು ನೆರವೇರಿಸಿದರು. ಅವರೊಂದಿಗೆ ಇನ್ಫೋಸೀಸ್‌ನ ಸುಧಾ ಮೂರ್ತಿ ಅವರು ಸಹ ಹೊಸ್ತಿಲು ಪೂಜೆ ನೆರವೇರಿಸಿದರು. ಜನಸಾಮಾನ್ಯರಂತೆ ಮಠದಲ್ಲಿ ಪಾತ್ರೆ ತೊಳೆಯುವುದು, ಹೂ ಕಟ್ಟುವುದು ಮುಂತಾದ ಸೇವೆಗಳನ್ನು ನೆರವೇರಿಸಿ ಗಮನ ಸೆಳೆದರು.

- Advertisement -

Related news

error: Content is protected !!