Friday, August 14, 2026
spot_imgspot_img
spot_imgspot_img

ಹಿಂದೂ ಜಾಗರಣ ವೇದಿಕೆ, ತಲಪಾಡಿ ವಲಯ, ಉಳ್ಳಾಲ ಇದರ ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ

- Advertisement -
- Advertisement -

ಉಳ್ಳಾಲ: ಹಿಂದೂ ಜಾಗರಣ ವೇದಿಕೆ, ತಲಪಾಡಿ ವಲಯ, ಉಳ್ಳಾಲ ಇದರ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಆ 16 ಭಾನುವಾರ ಸಂಜೆ 4.00 ಗಂಟೆಗೆ ದೇವಿಪುರದಲ್ಲಿ ನಡೆಯಲಿದೆ.

ಸನ್ಮಿತಾ ಹಾಲಿಡೇಸ್ (ಶೈಲೇಶ್ ಬಜಿಲಕೇರಿ) ಅವರ ಕೊಡುಗೆಯಾಗಿ ಆಂಬುಲೆನ್ಸ್ ಒದಗಿಸಲಾಗಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಶೋರ್ ಕುಮಾರ್ ನ್ಯಾಯವಾದಿ, ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಸಂಯೋಜಕರು ವಹಿಸಲಿದ್ದಾರೆ. ಅರುಣ್ ಬಂಗೇರಾ ಹಿರಿಯ ನ್ಯಾಯವಾದಿ ಮಂಗಳೂರು ಅವರು ಆಂಬುಲೆನ್ಸ್ ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ವಾಸುದೇವ ಗೌಡ ಹಿಂದೂ ಮುಖಂಡ , ನ್ಯಾಯವಾದಿ, ಸಂಜಯ್ ಕೋಟ್ಯಾನ್ ಹಿಂದೂ ಯುವಸೇನೆ ಮುಖಂಡ ಎಕ್ಕೂರು , ರಾಕೇಶ್ DEAN KMC HOSPITAL , ಅವಿನಾಶ್ ಸುವರ್ಣ ಹೊಟೇಲ್ ಜನತಾ ಲಂಚ್ ಹೋಮ್ ಮಾಲಕರು , ಪಮ್ಮಿ ಕೊಡಿಯಾಲ್ ಬೈಲ್ ಜನಪದ ಅಧ್ಯಕ್ಷರು, ಪ್ರಶಾಂತ್ ಕೆಂಪುಗುಡ್ಡೆ ಪ್ರಾಂತ್ಯ ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಸಂಯೋಜಕರು, ನರಸಿಂಹ ಮಾಣಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕರು, ಜಯಂತ್ ಕೊಂಡಾಣ ಅಧ್ಯಕ್ಷರು ಹಿಂದುಳಿದ ವರ್ಗ ಉಳ್ಳಾಲ , ಶೈಲೇಶ್ ಶೆಟ್ಟಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ ದೇವಿಪುರ, ರಾಹುಲ್ ಪೂಜಾರಿ ಸಂಯೋಜಕರು ಹಿಂದು ಜಾಗರಣ ವೇದಿಕೆ ಉಳ್ಳಾಲ ವಲಯ ಗೌರವ ಇವರು ಉಪಸ್ಥಿತಿ ವಹಿಸಲಿದ್ದಾರೆ

- Advertisement -

Related news

error: Content is protected !!