Friday, June 5, 2026
spot_imgspot_img
spot_imgspot_img

ಉಡುಪಿ: ಕಾರು ಢಿಕ್ಕಿ ಹೊಡೆದು ಸೈಕಲ್‌ ಸವಾರ ಮೃತ್ಯು..!

- Advertisement -
- Advertisement -

ಉಡುಪಿ: ಸೈಕಲ್‌‌ಗೆ ಕಾರು ಡಿಕ್ಕಿಯಾಗಿ ಸೈಕಲ್ ಸವಾರ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲ್ಲೂಕಿನ ಮಾಬುಕಳ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಹರಿಶ್ಚಂದ್ರ (49) ಎಂದು ಗುರುತಿಸಲಾಗಿದೆ.

ಪರಿಚಯದವರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಮಾಬುಕಳ ಜಂಕ್ಷನ್ ಬಳಿ ಸೈಕಲ್ ನಲ್ಲಿ ಬರುತ್ತಿದ್ದಾಗ ಅತಿ ವೇಗದಿಂದ ಬಂದ ಕಾರೊಂದು ಸೈಕಲ್ಲಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಸೈಕಲ್ ಸವಾರ ಹರಿಶ್ಚಂದ್ರ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!