Saturday, June 6, 2026
spot_imgspot_img
spot_imgspot_img

ಉಡುಪಿ: ಫೇಸ್‌ ಬುಕ್‌ ಮೂಲಕ ಪರಿಚಯವಾದ ವ್ಯಕ್ತಿಯಿಂದ ಬರೋಬ್ಬರಿ 19 ಲಕ್ಷ ರೂ ಕಳೆದುಕೊಂಡ ಮಹಿಳೆ

- Advertisement -
- Advertisement -

ಉಡುಪಿ: ಮಹಿಳೆಯೊಬ್ಬರು ಫೇಸ್‌ ಬುಕ್‌ ಮೂಲಕ ಪರಿಚಯಗೊಂಡ ವ್ಯಕ್ತಿಗೆ 19 ಲಕ್ಷ ರೂ. ಖಾತೆಗೆ ವರ್ಗಾಯಿಸಿ ವಂಚನೆಗೊಳಗಾದ ಘಟನೆ ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿದೆ.

ವಂಚನೆಗೊಳಗಾದವರು ಲಿನೆಟ್ ಸಿಮಾ ರೊಡ್ರಿಗಸ್‌ (38) ಕುವೈಟ್‌ ದೇಶದಲ್ಲಿ ಉದ್ಯೋಗದಲ್ಲಿದ್ದರು.

ಫೇಸ್ ಬುಕ್ ಮೂಲಕ ಆರೋಪಿ ಡಾ| ಆಯಂಡ್ರಿವ್‌ ಫೆಲಿಕ್ಸ್‌ ಎಂಬುವವರ ಪರಿಚಯವಾಗಿದೆ. ಆರೋಪಿಯು ವೃತ್ತಿಯಲ್ಲಿ ವೈದ್ಯ ಎಂಬುದಾಗಿ ತಿಳಿಸಿದ್ದಾನೆ. ಜತೆಗೆ ದೆಹಲಿಯಲ್ಲಿ ಒಂದು ಫಾರ್ಮಸಿ ತೆರೆಯುವುದಾಗಿ ನಂಬಿಸಿದಲ್ಲದೇ ಹಂತ ಹಂತವಾಗಿ 19 ಲಕ್ಷ ರೂ. ಮೊತ್ತವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವ ಘಟನೆಯ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving

- Advertisement -

Related news

error: Content is protected !!