Wednesday, May 8, 2024
spot_imgspot_img
spot_imgspot_img

ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ ಪ್ರತಿ ವರ್ಷದಂತೆ 2023 ನೇ ಸಾಲಿನ ಗೋದಾನ ಕಾರ್ಯಕ್ರಮ

- Advertisement -G L Acharya panikkar
- Advertisement -

ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ ಪ್ರತಿ ವರ್ಷದಂತೆ 2023ನೇ ಸಾಲಿನ ಗೋದಾನ ಕಾರ್ಯಕ್ರಮ

ಶಾಸ್ತ್ರ ಹೇಳುತ್ತದೆ,

ಯೂಯಂ ಗಾವೋ ಮೇದಯಥಾ ಕೃಶಃ ಚಿದಶ್ರೀರಮ್ ಚಿತ್ ಕೃಣುಥಾ ಸುಪ್ರತೀಕಂ |

ಭದ್ರಮ್ ಗೃಹಂ ಕೃಣುಥ ಭದ್ರವಾಚೋ ಬೃಹದ್ವೋ ವಯ ಉಚ್ಯತೇ ಸಭಾಸು ||


ಅಂದರೆ ಈ ಗೋವುಗಳ ಹಾಲು ಎಂಥಾ ದುರ್ಬಲರನ್ನೂ ಸುಪುಷ್ಟಗೊಳಿಸುತ್ತದೆ. ಕುರೂಪಿಯನ್ನೂ ಸುಂದರಗೊಸುತ್ತದೆ. ಮನೆಗೆ ಶೋಭೆ ತರುತ್ತದೆ. ಅಂತೆಯೇ ಸಭೆಗಳಲ್ಲಿ ಇವುಗಳ ಮಹಿಮೆಯನ್ನು ಕೊಂಡಾಡುತ್ತಾರೆ. ಶ್ರಮಿಕ ತರುಣರ ತಂಡವು ದುರ್ಬಲ, ಶಕ್ತಿಹೀನ ಕುಟುಂಬದ ಪರ ಅಗ್ರ ಸ್ಥಾನವನ್ನು ತುಂಬುವ ಮೂಲಕ ಅವರ ಬೇಕು ಬೇಡಗಳ ಪರಿಪೂರ್ಣತೆಗೆ ಮೊದಲ ಯೋಚನೆ ಮಾಡಿ ಶ್ರಮಿಸುತ್ತದೆ. ಒಂದು ಗೋವು ಒಂದು ಕುಟುಂಬಕ್ಕೆ ಎಷ್ಟು ರೀತಿಯಲ್ಲಿ ಆಧಾರವಾಗಿರುತ್ತದೆ ಎಂಬುದು ಬಡ ವರ್ಗಕ್ಕೆ ಮಾತ್ರ ತಿಳಿದಿದೆ.

ಈ ಬಾರಿಯ ಗೋದಾನ ಕಾರ್ಯಕ್ರಮ 41ನೇ ಶೀರೂರು ಸಂಬಂದಿಸಿದ ಒಬ್ಬ ಬಡ ಕುಟುಂಬದ ದನ ಆಕಸ್ಮಿಕವಾಗಿ ರಾತ್ರಿ ಸಮಯ ನಾಪತ್ತೆಯಾಗಿ ಆರು ತಿಂಗಳು ಕಳೆದರೂ ಸಿಗದ ಕಾರಣ ಅವರಿಗೆ ಆಧಾರವಾಗಿ ಗೋದಾನವನ್ನು ತಂಡದ ಸಂಸ್ಥಾಪಕರು ಡಾ| ಸಂತೋಷ್ ಕುಮಾರ್ ಬೈರಂಪಳ್ಳಿ ಯವರ ನೇತೃತ್ವದಲ್ಲಿ ತಂಡದ ಮಹಾ ಪೋಷಕರು ಶ್ರೀಮತಿ ವಿಜಯಶ್ರೀ ಮಾಧವ ಭಟ್ ಅಧ್ಯಕ್ಷತೆಯಲ್ಲಿ ಗೋವಿಗೆ ಪ್ರದಕ್ಷಿಣೆ ಮತ್ತು ಗೋಪೂಜೆಯೊಂದಿಗೆ ನೀಡಲಾಯಿತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಲು ವ್ಯವಸ್ಥೆಗೊಳಿಸಿದ ಸ್ಥಾಪಕ ಅಧ್ಯಕ್ಷರು ಪ್ರಕಾಶ್ ಕುಲಾಲ್ ಗೌರವಾಧ್ಯಕ್ಷರು ರಘುನಾಥ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿಶಾಂತ್ ಪೂಜಾರಿ, ಕೋಶಾಧಿಕಾರಿ ಸೂರಜ್ ಆಚಾರ್ಯ, ಮಹಿಳಾ ಘಟಕದ ಉಪಾಧ್ಯಕ್ಷ ಶ್ರೀಮತಿ ಶಶಿಕಲಾ ಪೂಜಾರಿ, ಕಾರ್ಯದರ್ಶಿ ಶ್ರೀಮತಿ ಕವಿತಾ ಉದಯ್, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಅನಿತಾ ದಿನಕರ್ ಪೂಜಾರಿ, ಮತ್ತು ಶ್ರೀಮತಿ ಕುಮಾರಿ, ಸದಸ್ಯರುಗಳಾದ ಶಿಲ್ಪ, ಪ್ರಕಾಶ್ ಕುಲಾಲ್, ಮನೀಶ್ ಪೂಜಾರಿ, ರಾಜೇಶ್ ಮತ್ತು ಊರಿನ ಹಿರಿಯರಾದ ಅಣ್ಣಪ್ಪ ಆಚಾರ್ಯ ಮತ್ತು ಗ್ರಾಮಸ್ತರು ಉಪಸ್ಥಿತರಿದ್ದರು.

ಗೋದಾನ 2023, ಪರಿಶ್ರಮ ಸೇವೆ ನಮ್ಮದು, ಆಶೀರ್ವಾದ_ನಿಮ್ಮದು

ಶ್ರಮಿಕ ತರುಣರ ತಂಡ ಬೈರಂಪಳ್ಳಿ, ಸಂತೋಷ್ ಕುಮಾರ್ ಬೈರಂಪಳ್ಳಿ ಅಭಿಮಾನಿ ಬಳಗ ಉಡುಪಿ ಜಿಲ್ಲೆ

- Advertisement -

Related news

error: Content is protected !!