Wednesday, June 17, 2026
spot_imgspot_img
spot_imgspot_img

ಉಡುಪಿ: ಆನ್‌ಲೈನ್‌ ಮೂಲಕ ಗುಜರಿ ವ್ಯಾಪಾರಿಗೆ ವಂಚನೆ..!

- Advertisement -
- Advertisement -

ಉಡುಪಿ: ಆನ್‌ಲೈನ್ ಮೂಲಕ ಗುಜರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲೆವೂರಿನ ರಾಮ ಎಂಬವರಿಗೆ ಸೆ.26ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಗುಜರಿಗೆ ಬ್ಯಾಟರಿಗಳಿವೆ ಎಂದು ಹೇಳಿದ್ದರು. ಇವರು ಕೆಜಿಗೆ 85ರೂ.ನಂತೆ ಮಾತುಕತೆ ನಡೆಸಿದ್ದರು. ಮುಂಗಡವಾಗಿ 50,000ರೂ. ಹಣವನ್ನು ನೀಡಲು ಅಪರಿಚಿತ ವ್ಯಕ್ತಿ ತಿಳಿಸಿದ್ದು ರಾಮ 25,000ರೂ. ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದರು. ಬಳಿಕ ಆ ವ್ಯಕ್ತಿ ಮೊಬೈಲ್ ಪೋನ್ ಸ್ವಿಚ್ ಆಫ್ ಮಾಡಿ ವಂಚನೆ ಮಾಡಿದ್ದಾನೆ ಎಂದು ದೂರಲಾಗಿದೆ.

- Advertisement -

Related news

error: Content is protected !!